ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ 50 ಸಾವಿರ ರೂ. ವೈದ್ಯಕೀಯ ವೆಚ್ಚ ನೀಡುವ ಸಂಬAಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತೀವ್ರ ಸ್ವರೂಪದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ ಶಸ ಚಿಕಿತ್ಸೆ, ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್, ಡಯಾಲಿಸಿಸ್, ಮೂತ್ರ ಪಿಂಡ ಕಾಯಿಲೆಗಳಿಗೆ ಗ್ರಾಮಪಂಚಾಯಿತಿ ನೌಕರರು ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ 50 ಸಾವಿರ ರೂ.ಗಳನ್ನು ಒಂದು ಬಾರಿ ಮಾತ್ರ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.
ರಾಜ್ಯ ಸರ್ಕಾರವು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ಆಶ್ವಾಸನಾ ನಿಧಿಯಿಂದ ಭರಿಸುವಂತೆ ಸೂಚನೆ ನೀಡಿದೆ.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಂದ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರ ನೀಡಲು ಹಾಗೂ ಅನಾರೋಗ್ಯ ಉಂಟಾದಲ್ಲಿ ಚಿಕಿತ್ಸಾವೆಚ್ಚ ಭರಿಸಲುಜಿಲ್ಲಾ ಪಂಚಾಯಿತಿಗಳಲ್ಲಿ ಆಶ್ವಾಸನಾ ನಿಧಿರಚಿಸಲು ಆದೇಶಿಸಲಾಗಿತ್ತು.















`
