Share this news

ಕಾರ್ಕಳ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜ.27 ಹಾಗೂ28 ರಂದು ನಡೆದ 6 ನೇ ವಿಫಾ ಕಪ್ ರಾಷ್ಟ್ರೀಯ ಟೇಕ್ವಾಂಡೋ ಪಂದ್ಯಾವಳಿಯಲ್ಲಿ 18 ವಯೋಮಿತಿಯೊಳಗಿನ 50 ಕೆಜಿ ಒಳಗಿನ ಪೂಮ್ಸೆ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಪ್ರಥಮ್ ಶೆಟ್ಟಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇದೇ ಪಂದ್ಯಾವಳಿಯಲ್ಲಿ ವಯೋಮಿತಿಯೊಳಗಿನ 50 ಕೆಜಿಯೊಳಗಿನ ಕ್ಯೊರುಗಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಇವರು ಹಿರ್ಗಾನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿಯ ಪುತ್ರನಾಗಿದ್ದು,ಸೇಂಟ್ ಮರಿಯಾ ಗೊರಟ್ಟಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

 
 

 

 
 

Leave a Reply

Your email address will not be published. Required fields are marked *