ಕಾರ್ಕಳ: ಕನ್ನಡಿಗರ ಹೆಗ್ಗುರುತು ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಹೊಣೆಯಾಗಿದೆ .ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಬೇಕು, ಕನ್ನಡ ಅಮೃತ ಭಾಷೆಯಾಗಿ ಮನೆ-ಮನಗಳಲ್ಲಿ ರಾರಾಜಿಸಲಿ.ಸ್ಪಷ್ಟ ಕನ್ನಡ, ಸ್ಪುಟ ಕನ್ನಡ ನಮ್ಮ ನಾಲಿಗೆಗಳಲ್ಲಿ ನಲಿದಾಡಲಿ. ಅಖಂಡ ಕರ್ನಾಟಕ ಇನ್ನಷ್ಟು ಬಲಿಷ್ಟಗೊಳ್ಳಲು ಶ್ರಮಿಸೋಣ ಎಂದು ಕಾರ್ಕಳ ಪ್ರಭಾರ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿದರು.
ಇಂದು ಕಾರ್ಕಳ ತಾಲೂಕಿನ ಗಾಂಧಿಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕವು ಅಖಂಡವಾಗಿ ಉಳಿಯಬೇಕು. ನದಿ ವಿವಾದ, ಗಡಿವಿವಾದಗಳು ಕೇವಲ ಭೌಗೋಳಿಕ ಅಡೆತಡೆಗಳಾಗಿದ್ದು ಕನ್ನಡ ಮನಸುಗಳನ್ನು ವಿಶ್ವವ್ಯಾಪಿಯಾಗಿ ಬೆಳೆಸಬೇಕು. ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು.
ಪೋಲೀಸ್ ಇಲಸಖೆ, ಗೃಹ ದಳ, ಸ್ಕೌಟ್ಸ್ & ಗೈಡ್ಸ್, ಶಾಲಾಮಕ್ಕಳು ಶಿಸ್ತಿನ ಪಥ ಸಂಚನಲದ ಮೂಲಕ ಧ್ವಜ ವಂದನೆ ನೀಡಿದರು.
ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು .ಅನಂತಶಯನ ಸರ್ಕಲ್ ನಿಂದ ಗಾಂಧಿ ಮೈದಾನದವರೆಗೆ ಸಾಗಿದ ಮೆರವಣೀಗೆಯಲ್ಲಿ ಅಕರ್ಷಕ ಟ್ಯಾಬ್ಲೋಗಳು ಗಮನ ಸೆಳೆದವು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.