Share this news

ಕಾರ್ಕಳ : ಕಾರ್ಕಳ ತಾಲೂಕು ತೆಳ್ಳಾರು ನಿವಾಸಿ ಸ್ಮಿತಾ ಎಂಬವರ ಮಾವ ಹಾಗೂ ಮಾವನ ಮಗಳಾದ ಆರತಿ ಅಶೋಕ್ ರವರ ನಡುವೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಸ್ಮಿತಾ ಅವರು ಜ.2ರಂದು ಪತಿ ಪ್ರಶಾಂತ್, ಮೈದುನ ಸಂದೀಪ್ ಕುಮಾರ್, ಅವರ ಪತ್ನಿ ಸುಜಾತ ಹಾಗೂ ಮಗಳು ಸಂಜನಾಳೊAದಿಗೆ ಬಜಗೋಳಿ ಕಡಾರಿಯಲ್ಲಿರುವ ತನ್ನ ಅತ್ತೆ ಲಕ್ಷ್ಮಿ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಶೋಕ್ ನಾಯರ್ ಹಾಗೂ ಆತನ ಪತ್ನಿ ಆರತಿ ಅಶೋಕ್ ನಾಯರ್ ಅಲ್ಲಿಗೆ ಬಂದಿದ್ದು ಅಶೋಕ್ ನಾಯರ್ ಸ್ಮಿತಾರಿಗೆ ನಮ್ಮನ್ನು ಕೇಳದೆ ಮನೆಗೆ ಪ್ರವೇಶಿಸಿದ್ದು ಯಾಕೆ? ಅತ್ತೆಯ ಸಂಪೂರ್ಣ ಆಸ್ತಿಯು ನನಗೆ ಸೇರಬೇಕು. ನೀವು ಅವರಲ್ಲಿ ಆಶೀರ್ವಾದ ಪಡೆಯುವ ನೆನಪಲ್ಲಿ ಅವರ ಮನೆಗೆ ಬಂದು ನನ್ನ ಅತ್ತೆ ಆಸ್ತಿಯನ್ನು ನನಗೆ ಸಿಗದ ಹಾಗೆ ಮಾಡುತ್ತೀರಿ. ನಿನ್ನನ್ನು ಹಾಗೂ ನಿನ್ನ ಪತಿಯನ್ನು ಹಾಗೂ ನಿನ್ನ ಪತಿಯ ಸಹೋದರನನ್ನು ಕತ್ತಿಯಿಂದ ಕಡಿದು ಕೊಲ್ಲುತ್ತೇನೆ ಎಂದು ಸ್ಮಿತಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಆರತಿ ನಾಯರ್ ಸ್ಮಿತಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಸುಜಾತ ಹಾಗೂ ಮತ್ತವರ ಮಗಳು ಸಂಜನಾಳಿಗೂ ರವರಿಗೆ ಹಲ್ಲೆ ನಡೆಸಿ ಇನ್ನು ಮುಂದೆ ಈ ಮನೆಗೆ ಪ್ರವೇಶಿಸಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಸ್ಮಿತಾ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *