Share this news

ಕಾರ್ಕಳ: ಗ್ರಾಮೀಣ ಮಟ್ಟದ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ರಾಜ್ಯ ಸರಕಾರವು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಹೇಳಿದರು.
ಅವರು ಕಾರ್ಕಳ ತಾಲೂಕಿನ ಮರ್ಣೆ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ತಹಶಿಲ್ದಾರ್ ಗ್ರಾಮ ವಾಸ್ತವ್ಯ ದಲ್ಲಿ ಭಾಗವಹಿಸಿ ಮಾತನಾಡಿದರು.


ಕಂದಾಯ ದಾಖಲಾತಿಗಳು ಭದ್ರವಾಗಿರಿಸುವ ಸಲುವಾಗಿ ಸರಕಾರವು ಡಿಜಿಟಲಿಕರಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಬಿಪಿ ಎಲ್ ಕಾರ್ಡ್ ಗಾಗಿ 1000 ಅರ್ಜಿಗಳು ಬಂದಿದ್ದು ಅವುಗಳಲ್ಲಿ ಆದ್ಯತೆ ನೆಲೆಯಲ್ಲಿ 400 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲಾಗಿದೆ . ಫೆಬ್ರವರಿ ತಿಂಗಳಲ್ಲಿ ಬಾಕಿ ಉಳಿದ ಎಲ್ಲಾ ಪಡಿತರ ಚೀಟಿ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದರು.ರಾಜ್ಯ ಸರಕಾರವು ಈಗಾಗಲೆ ಪಿಂಚಣಿ ಯೋಜನೆ, ಮಾಶಾಸನವನ್ನು ವಿತರಿಸಲಾಗುತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು

ಗ್ರಾಮಸ್ಥರಾದ ಕೃಷ್ಣ ನಾಯ್ಕ್ ಮಾತನಾಡಿ, ಪಂಚಾಯತ್ ಆವರಣದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸುವಂತೆ ತಹಶಿಲ್ದಾರರಿಗೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅಜೆಕಾರು ಪಂಚಾಯತ್ ಅಧಿಕಾರಿ ತಿಲಕ್ ರಾಜ್ ಮಾತನಾಡಿ ಈಗಾಗಲೇ ನಿಟ್ಟೆ ತಾಂತ್ರಿಕ ಕಾಲೇಜಿನ ಅಧ್ಯಯನ ತಂಡವು ಆಗಮಿಸಿ ಪರೀಕ್ಷೆಗೆ ಒಳಪಡಿಸಿ ಮಾಹಿತಿ ನೀಡಲಿದ್ದು, ಮಾಹಿತಿ ಅಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯತ್ ಗೆ ಸಂಬಂಧಿಸಿ 28 ಅರ್ಜಿಗಳು ಕಂದಾಯ ಇಲಾಖೆಯ 29 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಬಾಕಿ ಉಳಿದ 9 ಅರ್ಜಿಗಳನ್ನು ಸಧ್ಯದಲ್ಲೇ ಪರಿಹರಿಸುವುದಾಗಿ ತಹಶಿಲ್ದಾರ್ ಭರವಸೆ ನೀಡಿದರು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಣೆ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ ವಹಿಸಿದ್ದರು.
ಮುದ್ರಾಡಿಯ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ಆಮಂತ್ರಣ ದ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಸಭೆಯಲ್ಲಿ ಕಂದಾಯ ಇಲಾಖೆ ಪಂಚಾಯತ್‌ರಾಜ್ ಇಲಾಖೆ, ಭೂಮಾಪನ, ಮೆಸ್ಕಾಂ, ಅರಣ್ಯ, ಕೃಷಿ, ಸೇರಿದಂತೆ ವಿವಿಧ ಅಧಿಕಾರಿಗಳು ಗ್ರಾ.ಪಂ ಉಪಾಧ್ಯಕ್ಷ ಕುರುಂಬಿಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಧಿಕಾರಿ ತಿಲಕ್ ರಾಜ್ ಸ್ವಾಗತಿಸಿದರು. ಗ್ರಾ.ಪಂ .ಸದಸ್ಯ ರಾಘವೇಂದ್ರ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *