ಕಾರ್ಕಳ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನುಡಿಯಂತೆ ಧರ್ಮದ ಮಾರ್ಗದಲ್ಲಿರುವವರನ್ನು ಧರ್ಮವೇ ರಕ್ಷಿಸುತ್ತದೆ.ಪರಿಶುದ್ಧ ಮಾರ್ಗದ ಸಾಧನೆಯೇ ಜೀವನದ ಯಶಸ್ಸಿನ ಗುರುತು.ವ್ಯವಹಾರಿಕ ಜಗತ್ತಿನ ಆಗುಹೋಗುಗಳ ನಡುವೆ ಸದಾ ಗೆಲ್ಲುವುದು ಹೃದಯವಂತಿಕೆ.ಅAತಹ ಮೌಲ್ಯಧಾರಿತ ಬದುಕಿಗೆ ಮಾನವೀಯ ಗುಣ ಅಗತ್ಯ. ಈ ನಿಟ್ಟಿನಲ್ಲಿ ಗೆಳೆಯರ ಬಳಗದ ಸಮಾಜ ಸೇವೆಯು ಸದಾ ಶ್ಲಾಘನೀಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಚಿಂತಕ ಮುನಿರಾಜ ರೆಂಜಾಳ ಹೇಳಿದರು.
ಅವರು ಯಶಸ್ವಿ ಗೆಳೆಯರ ಬಳಗ ದೊಂಡೇರಂಗಡಿ ವತಿಯಿಂದ ಆಯೋಜಿಸಿದ್ದ 10ನೇ ವರ್ಷದ ಶನಿ ಕಲ್ಪೋಕ್ತ ಪೂಜೆಯ ಧಾರ್ಮಿಕ ಸಭೆಯಲ್ಲಿಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಆಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳ ಬೆಳವಣಿಗೆಯು ಯುವಕರಿಗೆ ವಿಫುಲ ಅವಕಾಶಗಳನ್ನು ತೆರೆದಿಡುತ್ತಿದ್ದು ಯುವಕರು ಸದಾ ಉತ್ಸುಕರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಅತಿಥಿಗಳಾಗಿ ಸುರೇಂದ್ರ ಶೆಟ್ಟಿ, ಡಿ ಲಕ್ಷ್ಮಣ್,ಚಲವಯ್ಯ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲೇಶ್ ಶೆಟ್ಟಿ ವಹಿಸಿದ್ದರು.ಹರೀಶ್ ದುಗ್ಗನಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ದೇವಾಡಿಗ, ಶಿವರಾಜ್ ಪೂಜಾರಿ, ದೀಪಕ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಅರುಣ್ ಶೆಟ್ಟಿ, ಮತ್ತಿತರರು ಸಹಕರಿಸಿದರು.
ಅರವಿಂದ ಹೆಗ್ಡೆ ಸ್ವಾಗತಿಸಿ ಹರೀಶ್ ಪರ್ಸರ್ ಬೆಟ್ಟು ವಂದಿಸಿದರು. ಶಂಕರ್ ನಾಯ್ಕ್ ಮತ್ತು ವಿನಯ ಆರ್ ಭಟ್ ನಿರೂಪಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವ ಮತ್ತು ಗೆಳೆಯರ ಬಳಗದ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು.