ಟರ್ಕಿ : ಟರ್ಕಿ, ಸಿರಿಯಾದಲ್ಲಿ ಸತತ ಎರಡು ದಿನಗಳಿಂದ ಭೂಮಿ ಕಂಪಿಸುತ್ತಿದ್ದು, ಇದೀಗ 5ನೇ ಬಾರಿಗೆ 7.8 ತೀವ್ರತೆಯ ಭೂಕಂಪ ಸಂಭವಿದ್ದು, ಜನರು ಅಪಾಯದಲ್ಲಿ ಸಿಲುಕಿದ್ದಾರೆ. ಈ ವಿನಾಶಕಾರಿ ಭೂಕಂಪದಿAದ ಮೃತಪಟ್ಟವರ ಸಂಖ್ಯೆ ಸುಮಾರು 5,000ಕ್ಕೆ ಏರಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಭೂಕಂಪನದಿAದ ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೂಕಂಪಕ್ಕೆ ಸಿರಿಯಾ, ಟರ್ಕಿ ಸಂಪೂರ್ಣ ನಲುಗಿದ್ದು, ಅಪಾರ ಪ್ರಾಣಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ 5 ಬಾರಿ ಉಂಟಾದ ಭೂಕಂಪನಗಳಿAದಾಗಿ ಅಪಾರ್ಟ್ಮೆಂಟ್ ಗಳು ಧರೆಗುರುಳಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪವು ಆಗಸ್ಟ್ 2021 ರಲ್ಲಿ ದೂರದ ದಕ್ಷಿಣ ಅಟ್ಲಾಂಟಿಕ್ನಲ್ಲಿ ಸಂಭವಿಸಿದ ಕಂಪನದ ನಂತರ ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯಿಂದ ವಿಶ್ವದಾದ್ಯಂತ ದಾಖಲಾದ ಅತಿದೊಡ್ಡ ಭೂಕಂಪವಾಗಿದೆ ಎಂದು ವರದಿಯಾಗಿದೆ.