ಬೆಂಗಳೂರು: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೀಕರ ಭೂಕಂಪಕ್ಕೆ ಸಾವಿರಾರು ಮಂದಿ ಅಸುನೀಗಿದ್ದಾರೆ. ಟರ್ಕಿಯಲ್ಲಿ 3 ಸಾವಿರ ಭಾರತೀಯರಿದ್ದು, ಅವರ ಪೈಕಿ ನೂರಾರು ಮಂದಿ ಕನ್ನಡಿಗರೂ ಇದ್ದಾರೆ. ಇವರ ಸುರಕ್ಷತೆಗೆ ಮತ್ತು ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಸಹಾಯವಾಣಿಯನ್ನೂ ಆರಂಭಿಸಲಾಗಿದೆ.
ದೆಹಲಿ ಕರ್ನಾಟಕ ಭವನ ಸ್ಥಾನಿಕ ಆಯುಕ್ತ ಹಾಗೂ ಐಎಎಸ್ ಅಧಿಕಾರಿ ಎಮ್ಕೊಂಗ್ಲಾ ಜಮೀರ್ (ಐಎಎಸ್) ಅವರು ನೋಡಲ್ ಅಧಿಕಾರಿ ಆಗಿರಲಿದ್ದಾರೆ. 080-22340676 ಈ ಹೆಲ್ಪ್ಲೈನ್ ನಂಬರ್ ಅನ್ನು ನೀಡಲಾಗಿದೆ. ಟರ್ಕಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದ್ದು, ಕನ್ನಡಿಗರು ಸುರಕ್ಷಿತವಾಗಿರುವುದನ್ನು ಖಚಿಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.
ಇದೇ ವೇಳೆ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಬಂದ ಮಾಹಿತಿ ಪ್ರಕಾರ ಬೆಂಗಳೂರು ಕಂಪನಿಯೊAದರ ಒಬ್ಬ ಉದ್ಯೋಗಿಯು ಟರ್ಕಿಯಲ್ಲಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇತರ 10 ಮಂದಿ ಆ ದೇಶದ ದೂರ ಪ್ರದೇಶಗಳಲ್ಲಿ ಸಿಲುಕಿರುವ ಸಂಗತಿಯನ್ನು ಬಹಿರಂಗಪಡಿಸಲಾಗಿದೆ. ಈ ಹತ್ತು ಮಂದಿ ಸುರಕ್ಷಿತವಾಗಿರುವುದೂ ಖಚಿತಪಟ್ಟಿದೆ.
ಎರಡು ದಿನಗಳಿಂದ ಕಾಣಿಯಾಗಿರುವ ವ್ಯಕ್ತಿ ಬೆಂಗಳೂರು ಮೂಲದ ಕಂಪನಿಯ ಉದ್ಯೋಗಿಯಾಗಿದ್ದು, ಬಿಸಿನೆಸ್ ಟ್ರಿಪ್ ಸಂಬAಧ ಟರ್ಕಿಗೆ ಹೋಗಿದ್ದರೆನ್ನಲಾಗಿದೆ. ಆದರೆ, ಇವರು ಕನ್ನಡಿಗರಲ್ಲ ಎನ್ನುವ ಮಾಹಿತಿಯನ್ನು ರಾಜ್ಯ ವಿಪತ್ತು ನಿರ್ಹಹಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿ ಬೇರೆ ರಾಜ್ಯದವರಾಗಿದ್ದು, ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.