Share this news

ಕಾರ್ಕಳ : ತಾಲೂಕಿನ  ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೀದಿ ಬೈಲೂರು ಇಲ್ಲಿ ಮಹಾಶಿವರಾತ್ರಿ ಗೌಣೋತ್ಸವು ಫೆ. 18ರಿಂದ ಫೆ. 22ರವರೆಗೆ ಆಗಮ ತಂತ್ರ ವಿಧಿವಿಧಾನಗಳೊಂದಿಗೆ ಬ್ರಹ್ಮಶ್ರೀ ವೇ|ಮೂ| ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.

 

ಫೆ. 18ರಂದು ಬೆಳಿಗ್ಗೆ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ನವಕ ಪ್ರದಾನ ಕಲಶಾಭಿಷೇಕ, ತೋರಣ ಮೂಹೂರ್ತ, 10ಕ್ಕೆ ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಾಯಂ.ಗAಟೆ 6ರಿಂದ ಉತ್ಸವ ಬಲಿ, ವಸಂತಪೂಜೆ, ರಾತ್ರಿ ಪೂಜೆ ನಡೆಯಲಿದೆ. ಫೆ. 19ರಂದು ಬೆಳಿಗ್ಗೆ ಪುಣ್ಯಾಹ ವಾಚನ, ವಿಶೇಷ ಅಭಿಷೇಕಗಳು ಪ್ರಸನ್ನ ಪೂಜೆ, ಗಂಟೆ 9ಕ್ಕೆ ರುದ್ರಾಭಿಷೇಕ, ಮಹಾ ಪೂಜೆ, ಉತ್ಸವ ಬಲಿ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂ. ಗಂಟೆ 6ರಿಂದ ಉತ್ಸವ ಬಲಿ, ಕಟ್ಟೆಪೂಜೆ, ವಸಂತ ಪೂಜೆ, ರಾತ್ರಿ ಪೂಜೆ, ಮಹಾರಂಗ ಪೂಜೆ, ಮಹಾ ಭೂತಬಲಿ, ಶಯನೋತ್ಸವ, ಕವಾಟಬಂಧನ ಕಾರ್ಯಕ್ರಮಗಳು ನೆರವೇರಲಿದೆ.

ಫೆ. 20 ರಂದು ಬೆಳಿಗ್ಗೆ ಘಂಟೆ 10ಕ್ಕೆ ಕವಾಟೋದ್ಘಾಟನೆ ದಶವಿಧಸ್ನಾನ ಮಹಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂ. ಗಂಟೆ 6ರಿಂದ ಉತ್ಸವ ಬಲಿ, ಓಕುಳಿ, ವಸಂತ ಪೂಜೆ, ಅವಭೃತ ಸ್ನಾನ, ಕಟ್ಟೆಪೂಜೆ, ಧ್ವಜಾವರೋಹಣ ನಂತರ ರಾತ್ರಿ ಗಂಟೆ 9ರಿಂದ ಕೊಡಮಣಿತ್ತಾಯ ನೇಮ ನಡೆಯಲಿದೆ. ಫೆ. 21ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾ ಪೂಜೆ, ಪ್ರಮಥ ಶುದ್ಧಿ, ಸಂಸ್ಕಾರ ರಾತ್ರಿ 8.00ರಿಂದ ಬೈದರ್ಕಳ ನೇಮ, ರಾತ್ರಿ ಗಂಟೆ 10 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಫೆ. 22ರಂದು ರಾತ್ರಿ ಗಂಟೆ 7.30ಕ್ಕೆ ಜುಮಾದಿ-ಜುಮಾದಿ ಬಂಟ ನೇಮ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *