Share this news

ಕಾರ್ಕಳ :ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾರ್ಕಳ ತಾಲೂಕಿನ ಈದು ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸ್ಮಾರು ಡಾಬಾ ಬಳಿಯ ಕಾಂಕ್ರಿಟ್ ರಸ್ತೆಯ ಗುದ್ದಲಿ ಪೂಜೆಯನ್ನು ಎನ್ ವಿಜಯ್ ಕುಮಾರ್ ಜೈನ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಪ್ರೇಮ್ ಕುಮಾರ್ ಜೈನ್ , ಈದು ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ, ಕಾರ್ಯದರ್ಶಿ ಸುದೇಶ್ ರಾವ್, ಸದಸ್ಯರಾದ ಸುರೇಶ್, ರಮೇಶ್ ಜೆ. ಕೆ, ಜಯ ಸುವರ್ಣ,ರಮಣಿ, ನಯನ, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರೋಜ್ ಜೋಸೆಫ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವ ಪ್ರತಿನಿಧಿ ಮಲ್ಲಿಕಾ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *