Share this news

ಕಾರ್ಕಳ: ಉಮೇಶ್ ಹೆಗ್ಡೆ ಬಾಲ್ಯದಿಂದಲೇ ಕಲೆಯನ್ನು ಮೈಗೂಡಿಸಿಕೊಂಡು ರಂಗಭೂಮಿಯಲ್ಲಿ ಮಿಂಚಿದವರು. ಕಲಾಸೇವೆಯಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅವರ ಕಲಾಸೇವೆ ಅಭಿನಂದನೀಯ ಎಂದು ನಿವೃತ್ತ ಶಿಕ್ಷಕ ಶಂಕರ್ ಶೆಟ್ಟಿ ಹೇಳಿದರು.

ಅವರು ಅಭಿನಯಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗ ವತಿಯಿಂದ ಕಡ್ತಲ ಸಿರಬೈಲು ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಉಮೇಶ್ ಹೆಗ್ಡೆ ಸಂಸ್ಮರಣೆ ಹಾಗು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಮೇಶ್ ಹೆಗ್ಡೆ ಹೆಸರಿನಲ್ಲಿ ನಡೆಯುವ ಕಲಾ ಸೇವೆಯ ತರಬೇತಿಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೆಕೆಂದು ಕರೆ ನೀಡಿದರು.

ದಿವಾಕರ ಕಟೀಲು ಮಾತನಾಡಿ ರಂಗಭೂಮಿ ಕಲಾವಿದರು ಭಾವಜೀವಿಗಳು. ಸಣ್ಣ ವಿಚಾರಗಳಿಗೂ ಸ್ಪಂದಿಸುವ ಹೃದಯವಂತರು ಎಂದು ಉಮೇಶ್ ಹೆಗ್ಡೆ ಅವರೊಂದಿಗಿನ ಒಡನಾಟವನ್ನು ನೆನಪಿಸಿದರು .

ಹವ್ಯಾಸಿ ಕಲಾವಿದ ಶೇಖರ್ ನಾಯ್ಕ್ ಕಡ್ತಲ ಪ್ರಾಸ್ತಾವಿಕ ಮಾತನಾಡಿ ಸಾಧನೆಯ ಹಿಂದೆ ಇರುವ ಶ್ರಮವನ್ನು ನೆನಪಿಸುವ ಕಾರ್ಯವಾಗಬೇಕಿದೆ ಎಂದರು.

ರAಗಭೂಮಿ ಕಲಾವಿದ ಸುನೀಲ್ ನೆಲ್ಲಿಗುಡ್ಡೆ , ಚಂದ್ರಶೇಖರ ಭಟ್ ಬಲ್ಲಡಿ, ನಾಗರಾಜ್ ಗುರುಪುರ, ಉಪನ್ಯಾಸಕ ಜನಾರ್ದನ ನಾಯಕ್ , ಮನೋಜ್ ಕುಮಾರ್ ಹೆಗ್ಡೆ , ದಿವಾಕರ್ ಕಟೀಲ್ ಸುರೇಶ್ ಸುವರ್ಣ ಉಪಸ್ಥಿತರಿದ್ದರು.

ಅಂತರಂಗ

ಇದೇ ಸಂದರ್ಭದಲ್ಲಿ ಉಮೇಶ್ ಹೆಗ್ಡೆ ಕಡ್ತಲ ಒಡನಾಡಿ ಅಭಿಮಾನಿಗಳು ಬರೆದ “ರಂಗ  ಅಂತರಂಗ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಪ್ರದೀಪ್ ಸಿರಿಬೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೇಯ ಹಾಗೂ ಪೂಜಾ ಪಾರ್ಥಿಸಿದರು,

Leave a Reply

Your email address will not be published. Required fields are marked *