ಕಾರ್ಕಳ: ಗ್ರಾಮದ ದೈವ ದೇವರುಗಳ ಸಾನಿಧ್ಯಗಳು ಅಭಿವೃದ್ಧಿ ಹೊಂದಿದಾಗ ಆ ಗ್ರಾಮವು ಸುಭಿಕ್ಷೆಯಿಂದ ಇರಲು ಸಾಧ್ಯ ಎಂದು ಮುಂಬಯಿ ಉದ್ಯಮಿ ಹಾಗೂ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಜೆಕಾರು ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು.
ಅವರು ಅಜೆಕಾರು ಮಿತ್ತೊಟ್ಟುಗುತ್ತು ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ ಗರಡಿಗೆ ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಮಾರು1.75 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಪುಣ್ಯಕಾರ್ಯಕ್ಕೆ ಗ್ರಾಮದ ಭಕ್ತಾದಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭರತ್ ರಾಜ್ ಇಂದ್ರ, ಪ್ರಸನ್ನ ಇಂದ್ರ, ಶ್ಯಾಮರಾಯ ಶೆಟ್ಟಿ ಕಲ್ಕುಡಮಾರ್, ಹರ್ಷ ಶೆಟ್ಟಿ, ಪ್ರದೀಪ್ ಅಮೀನ್, ಸುಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಠಿನಿ, ವಿಜಯಕುಮಾರ್ ಬಂಗ, ಯುವರಾಜ ಪೂವಣಿ, ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರತ್ನಾಕರ್ ಅಮೀನ್, ಮಂಜುನಾಥ, ಟಿ, ರಾಮನಾಥ ಶೆಣೈ, ಸುರೇಶ್ಚಂದ್ರ ಜೈನ್, ವಕೀಲ ಸೂರಜ್ ಜೈನ್, ಶೀತಲ್ ಜೈನ್ ಶಿರ್ಲಾಲು, ಡಾ.ಜನಾರ್ಧನ ನಾಯಕ್,ತಾರನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಪದ್ಮರಾಜ ಜೈನ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು
ಗರಡಿಯ ಅನುವಂಶಿಕ ಮೊಕ್ತೇಸರರಾದ ರತ್ನವರ್ಮ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಪೂಜಾರಿ ಸ್ವಾಗತಿಸಿದರು, ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

