ಅಜೆಕಾರು : ಹಿಂದೂ ಜಾಗರಣ ವೇದಿಕೆ ಅಜೆಕಾರು ವಲಯ ವತಿಯಿಂದ ಮಾರ್ಚ್.21 ರಂದು ಯುಗಾದಿ ಹಬ್ಬದ ಪ್ರಯುಕ್ತ ಅಜೆಕಾರು ಪೇಟೆಯಲ್ಲಿ ಯುಗಾದಿ ಸಂಭ್ರಮ -20203 ನಡೆಯಲಿದೆ.

ಸಂಜೆ 5 ಗಂಟೆಯಿಂದ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮ ಹಾಗೂ ಅಶೋಕ್ ಪೊಳಲಿ ಅವರಿಂದ ಬೃಹತ್ ಗಾತ್ರದ ಕೋಳಿ ನೃತ್ಯ ಮತ್ತು ದ್ವಿಪಾತ್ರ ನೃತ್ಯ ಹಾಗೂ ಇನ್ನಿತರ ವಿಭಿನ್ನ ಶೈಲಿಯ ನೃತ್ಯಗಳು ನಡೆಯಲಿವೆ.
ರಾತ್ರಿ 7:30 ರಿಂದ ರಂಗಭೂಷಣ ಮಣಿ ಕೋಟೆಬಾಗಿಲು ನಿರ್ದೇಶನದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯದ ಭರಣಿ ಕೃತಿಕೆ ನಾಟಕ ನಡೆಯಲಿದೆ.

ಧಾರ್ಮಿಕ ಸಭೆಯಲ್ಲಿ ಯುವವಾಗ್ಮಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದು ನಿವೃತ್ತ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಅಮೀನ್ ತಿಳಿಸಿದ್ದಾರೆ.

