ಕಾರ್ಕಳ : ಕಾರ್ಕಳ ತಾಲೂಕಿನ ಕುಕ್ಕುಜೆ ದೊಂಡೇರಂಗಡಿ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ ಶ್ರೀ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಮಾಯಂದಾಲ ಪರಿವಾರ ದೈವಗಳ ದೊಂಪದ ಬಲಿ ನೇಮೋತ್ಸವವು. ಮಾ.23 ರಿಂದ 25ರ ವರೆಗೆ ಜರುಗಲಿರುವುದು.
ಮಾರ್ಚ್ 25ರಂದು ಭಂಡಾರ ಇಳಿಯುವುದು, 24. ರಂದು ಧರ್ಮರಸು ನೇಮ, ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ನೇಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್.25ವರಂದು ಮಾಯಂದಲ ಕೋಲ, ಇರುಳು ಮರುಳು ದೈವಗಳ ನೇಮ, ವರ್ತೆ ಕಲ್ಕುಡ ಮತ್ತು ತೂಕತ್ತೇರಿ ದೈವಗಳ ಸಿರಿ ಸಿಂಗಾರ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತಪಣೆ ನಡೆಯಲಿದೆ .
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವತಾ ಕಾರ್ಯದಲ್ಲಿ ಭಾಗವಹಿಸಬೇಕಾಗಿವ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.