ಮಂಗಳೂರು: ಮಂಗಳೂರಿನ ನಾಗುರಿ ಬಳಿ 2022ರ ನವೆಂಬರ್ 19 ರ ಸಂಜೆ 4.30 ರ ಸುಮಾರಿಗೆ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಗೆ ಸಂಬಂಧಿಸಿ ಶಂಕಿತರ ಹೆಜ್ಜೆ ಗುರುತು ಹುಡುಕುತ್ತಾ ಹೋದಂತೆ ಹೊಸ ಹೊಸ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಶಂಕಿತ ಉಗ್ರ ಶಾರೀಕ್ ಸಂಬಂಧಿಸಿದಂತೆ ಎನ್ಐಎ(NIA) ಇಂಚಿಂಚು ಪರಿಶೀಲನೆ ನಡೆಸಿದ್ದು ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ ಅದ್ರಲ್ಲಿದ್ದ PDF ಪೈಲ್‌ಗಳು ಸಿಕ್ಕಿವೆ.
NIA ತಂಡ ಶಾರಿಕ್ ಬಳಿ 80GBಯ ಪೆನ್ ಡ್ರೈವ್ ಪತ್ತೆ ಹಚ್ಚಿದೆ. ಆ ಪೆನ್ ಡ್ರೈವ್ನಲ್ಲಿ ಶಂಕಿತರ ಹಲವಾರು ಸ್ಫೋಟಕ PDFನ ರಹಸ್ಯ ಫೈಲ್ಗಳು ಪತ್ತೆಯಾಗಿವೆ. ಹಲವು ಪ್ರಚೋದನಕಾರಿ ವಿಡಿಯೋಗಳು, ಹಿಟ್ ಸ್ಕ್ವಾಡ್ ಬಗೆಗಿನ ಮಾಹಿತಿ, ಕೋಮು ವಿಧ್ವಂಸಕ ಕೃತ್ಯಗಳ ಪ್ಲಾನಿಂಗ್ ಸೇರಿ ಹಲವು ಮಾಹಿತಿಗಳು ಸಿಕ್ಕಿವೆ. ಕುಕೃತ್ಯ ನಡೆಸಲು ಎಲ್ಲೆಲ್ಲಿ ಪ್ಲಾನಿಂಗ್ ಮಾಡಿದ್ದ ಸ್ಥಳದ ವಿಡಿಯೋಗಳು ಪತ್ತೆಯಾಗಿವೆ. 80 ಜಿಬಿ ಪೆನ್ ಡ್ರೈವ್ ನಲ್ಲಿ ಭಾಷಣಗಳು, ವಿಧ್ವಂಸಕ ಕೃತ್ಯಕ್ಕೆ ಬೇಕಾದ ಒಂದಷ್ಟು ಅಂಶಗಳು ಸಿಕ್ಕಿವೆ. ಅಲ್ಲದೆ ಶಾರಿಕ್ ಹಾಗೂ ಮತಿನ್ ಇಬ್ಬರೂ ಕಾನೂನು ಸುವ್ಯವಸ್ಥೆ ಹದಗೆಡಲು ಏನೇನು ಮಾಡಬೇಕು ಎಂಬ ಬಗ್ಗೆ ತನ್ನ ಸಹಚರರಿಗೆ ವಿಡಿಯೋ ಮಾಡಿ ಸೂಚನೆ ನೀಡಿದ್ದರು.