Share this news

ಕಾರ್ಕಳ : ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್-ಇಗ್ಮಾ 2023 ಶೌರ್ಯ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ  ಏ.3 ಮತ್ತು ಏ.4 ರಂದು ಜರುಗಿತು.

ಖ್ಯಾತ ಹಿನ್ನಲೆ ಗಾಯಕ ಅಜಯ್ ವಾರಿಯರ್ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ವಿವಿಧ ಕಾಲೇಜುಗಳಿಂದ ಸ್ಪರ್ಧೆಗಾಗಿ ಬಂದಿದ್ದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಎರಡು ದಿನಗಳ ಸಾಂಸ್ಕೃತಿಕ ಮತ್ತು ಮ್ಯಾನೆಜ್ ಮೆಂಟ್ ಸ್ಪರ್ಧೆಯಲ್ಲಿ ಒಟ್ಟು 51 ಕಾಲೇಜುಗಳಿಂದ 1030 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಏ.3 ರ ಸಂಜೆ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳಿಗೆ ಮನರಂಜನೆಗಾಗಿ ಕನ್ನಡದ ಖ್ಯಾತ ಗಾಯಕರಾದ ಅಜಯ್ ವಾರಿಯರ್, ದಿವ್ಯ ರಾಮಚಂದ್ರ, ನಾದಿರ ಭಾನು ಮತ್ತು ಸುಪ್ರಿತ್ ಸಪಳಿಗ ಅವರನ್ನು ಒಳಗೊಂಡ ತಂಡದಿAದ ಸಂಗೀತ ಸಂಜೆ ನಡೆಯಿತು.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಬ್ರಾಂಚ್ ಎಸ್.ಐ.ಆರ್.ಸಿ.ಆಫ್.ಐ.ಸಿ.ಎ.ಐ ಯ ಅಧ್ಯಕ್ಷ ಸಿ.ಎ. ಮಹೇಂದ್ರ ಶೆಣೈ ಪಿ ಅವರು ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪ್ರಶಸ್ತಿ ನೀಡಿ ಶುಭಹಾರೈಸಿದರು.

ಆಳ್ವಾಸ್ ಪದವಿ ಕಾಲೇಜು ಮೂಡಬಿದಿರೆ ಅಂತರ್ ಕಾಲೇಜು  ಸಾಂಸ್ಕೃತಿಕ ಮತ್ತು ಮ್ಯಾನೇಜ್ ಮೆಂಟ್ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಎಂ.ಪಿ.ಎಂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಾರ್ಕಳ ಪಡೆದುಕೊಂಡಿತು

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ಮೈಟೆನೆನ್ಸ್ & ಡೆವಲ್ಮೆಂಟ್ ವಿಭಾಗದ ನಿರ್ದೇಶಕ ಯೋಗಿಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ. ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಎಂ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಸ್ವೀಡಲ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ನಿಶ್ಮಿತಾ ಶೆಟ್ಟಿ ಮತ್ತು ಮೀನಾಕ್ಷಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಪರಿಷತ್ ನಿರ್ದೇಶಕ ವಿಘ್ನೇಶ್ ಶೆಣೈ ಬಿ ವಂದಿಸಿದರು. ಕುಮಾರಿ ಮೆಲಿಟಾ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *