ಹೆಬ್ರಿ :ಹೆಬ್ರಿಯ ರಾಪಿಡ್ ಇನ್ಸ್ಟಿಟ್ಯೂಟ್ ಆಪ್ ಅಬಾಕಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆಯು ಹೆಬ್ರಿ ಸಮಾಜ ಮಂದಿರದಲ್ಲಿ ಎ.12ರಂದು ನಡೆಯಿತು.
ಹೆಬ್ರಿ ಗ್ರಾಮ ಪಂಚಾಯತ್ ಪಿ. ಡಿ. ಓ ಸದಾಶಿವ ಸೇರ್ವೆಗಾರ್ ಶಿಬಿರದ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಕಳ ವಲಯ ಶಿಕ್ಷಣ ಸಂಯೋಜಕ ಪ್ರವೀಣ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದಲ್ಲಿ ಸುಮಾರು 150ಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸುತ್ತಿರುವುದ್ದನ್ನು ಕಂಡು ಸಂತಸಗೊAಡಿದ್ದೇನೆ. ರಜಾ ಸಮಯವನ್ನು ಮನೆಯಲ್ಲಿ ಸುಮ್ಮನೆ ಕಳೆಯುವುದರ ಬದಲು, ಇಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಕಲಿಯುವಿಕೆಯ ಬೌದ್ಧಿಕ ಗುಣಮಟ್ಟ ಇನ್ನೂ ಹೆಚ್ಚಲಿದೆ. ನೀವು ಕಲಿಯುವ ಆಟ, ಪಾಠ, ತರಬೇತಿಗಳು ನಿಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಮಕ್ಕಳು ಶಿಸ್ತಿನಿಂದ ಇದ್ದು ಶಿಬಿರದ ಪ್ರಯೋಜನ ಪಡೆದುಕೊಳ್ಳಿ. ಶಿಬಿರವು ಯಶಸ್ವಿಯಾಗಿ ನಡೆದು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಹೆಬ್ರಿ ಮೈಸ್ ಕಂಪ್ಯೂಟರ್ ಸೆಂಟರ್ ನ ಸಂಚಾಲಕರಾದ ಕಬ್ಬಿನಾಲೆ ರಾಮಚಂದ್ರ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಹೆಬ್ರಿ ಅಬಾಕಸ್ ಸಂಸ್ಥೆಯ ಮುಖ್ಯ ಶಿಕ್ಷಕಿ ಸುನಿತಾ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ತರಬೇತುದಾರರಿಂದ ನೃತ್ಯ, ಸಂಗೀತ,ಚಿತ್ರ ಕಲೆ, ಪೈಂಟಿAಗ್, ಕ್ರಾಫ್ಟ್,ಕುಣಿತ ಭಜನೆ, ಯೋಗ, ಅರೋಗ್ಯ, ಮಾಹಿತಿ ಕಾರ್ಯಕ್ರಮ ಮೊದಲಾದುವುಗಳ ಬಗ್ಗೆ ಇಂದಿನಿAದ ಏಪ್ರಿಲ್ 30ರ ವರೆಗೆ ಶಿಬಿರದಲ್ಲಿ ವಿವಿಧ ಚಟುವಟಿಕೆಗಳು, ಸ್ಪರ್ಧೆಗಳು ನಡೆಯುತ್ತದೆ. ಇನ್ನೂ ಹೆಚ್ಚಿನ ಮಕ್ಕಳು ಶಿಬಿರಕ್ಕೆ ಹಾಜರಾಗಲು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದರು.
ಶಿಕ್ಷಕಿ ಅಮೃತ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಶಿಕ್ಷಕಿ ವಂದಿಸಿದರು.ಅಬಾಕಸ್ ಸಂಸ್ಥೆಯ ಶಿಕ್ಷಕಿಯರು, ಮಕ್ಕಳ ಪೋಷಕರು ಹಾಜರಿದ್ದರು.

