ಅಜೆಕಾರು:ಉದ್ಯಮಗಳು ಬೆಳೆದಾಗ ಹಳ್ಳಿಗಳ ಪ್ರಗತಿಯಾಗಲು ಸಾಧ್ಯ, ಅಜೆಕಾರಿನಂತಹ ಸಣ್ಣ ಊರಿನಲ್ಲಿ ಶಾಲೋಮ್ ಪ್ರಗತಿ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು.

ಅವರು ಏಪ್ರಿಲ್ 14 ರಂದು ಅಜೆಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸೂಪರ್ ಮಾರ್ಕೆಟ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

ಅಜೆಕಾರು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ಪ್ರವೀಣ್ ಅಮೃತ್ ಮಾರ್ಟಿಸ್ ನೂತನ ವಾಣಿಜ್ಯ ಹಾಗೂ ವಸತಿ ಸಮ್ಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿ, ಹಳ್ಳಿಯ ಜನರು ಯಾವುದೇ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲವೂ ಸಿಗಲಿದೆ. ಈ ಉದ್ಯಮ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ಸಮಾಜವನ್ನು ಬೆಸೆಯುವ ಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.

ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕು,ಈ ನಿಟ್ಟಿನಲ್ಲಿ ಅಜೆಕಾರು ಉದ್ಯಮಿ ಸುಜಯ ಶೆಟ್ಟಿ ಹಾಗೂ ಅವರ ಪಾಲುದಾರರು ಕೇವಲ ಲಾಭಕ್ಕಾಗಿ ಉದ್ಯಮ ಮಾಡಿದವರಲ್ಲ ತಮ್ಮ ಊರಿನ ಜನರಿಗೆ ಒಂದಷ್ಟು ಉದ್ಯೋಗ ,ವ್ಯಾಪಾರ ಅಭಿವೃದ್ಧಿಯಾಗಲಿ ಎನ್ನುವ ಮನೋಭಾವನೆಯಿಂದ ಉದ್ಯಮ ಆರಂಭಿಸಿದ್ದಾರೆ. ಅಜೆಕಾರಿನ ಸಣ್ಣ ಊರಿನಲ್ಲಿ ಸೂಪರ್ ಮಾರ್ಕೆಟ್ ನಂತಹ ಪರಿಕಲ್ಪನೆ ಅದ್ಭುತ, ಜನರಿಗೆ ತಮ್ಮ ಊರಿನಲ್ಲಿಯೇ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಹಾವೀರ ಹೆಗ್ಡೆ, ಶೇಕ್ ಉಮ್ಮರ್ ಸಾಹೇಬ್,ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಪೂಜಾರಿ, ಪ್ರೇಮಾನಂದ ಶೆಣೈ, ಧರ್ಮೇಂದ್ರ ರೈ, ಕಟ್ಟಡದ ಪಾಲುದಾರರಾದ ಹರೀಶ್ ಶೆಟ್ಟಿ ಪಡುಕುಡೂರು ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡದ ಗುತ್ತಿಗೆದಾರ ಹಾಗೂ ವಿನ್ಯಾಸಕಾರರನ್ನು ಸನ್ಮಾನಿಸಲಾಯಿತು.
ಕಟ್ಟಡದ ಪಾಲುದಾರರಾದ ಸುಜಯ ಶೆಟ್ಟಿ ಸ್ವಾಗತಿಸಿ,ಪಾಲುದಾರರಾದ ಗುರುಪ್ರಸಾದ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು


