Share this news

ಮಂಗಳೂರು: ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರು ಕರಾವಳಿ ಭಾಗದಲ್ಲಿ ಟೆಂಬಪ್ ರನ್ ಆರಂಭಿಸಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಅವರು ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಆಗಮಿಸಿದ್ದಾರೆ.

ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಡಿಕೆಶಿ ಕುಟುಂಬಸ್ಥರು ಆಗಮಿಸಿದ್ದ ಹೆಲಿಕಾಪ್ಟರ್​ ತಪಾಸಣೆಗೆ ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಪೈಲಟ್, ಇದು ಖಾಸಗಿ ಹೆಲಿಕಾಪ್ಟರ್, ಪರಿಶೀಲಿಸಲು ಅವಕಾಶವಿಲ್ಲವೆಂದು ಮಾತಿಗೆ ಇಳಿದಿದ್ದಾರೆ. ಪೈಲಟ್ ರಾಮದಾಸ್ ಹಾಗೂ ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಹೆಲಿಕಾಪ್ಟರ್ ತಪಾಸಣೆ ಮಾಡಲಾಯಿತು.

Leave a Reply

Your email address will not be published. Required fields are marked *