ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಬಂಗ್ಲೆಗುಡ್ಡೆ 1 ಮತ್ತು 2ನೇ ವಾರ್ಡಿನ 30 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಗಿರಿ ರಾಣೆಯವರ ನೇತೃತ್ವದಲ್ಲಿ, ಕಾಂಗ್ರಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅದ್ಯಕ್ಷ ಶುಭದ ರಾವ್, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ವಿಪಕ್ಷ ನಾಯಕ ಆಶ್ಪಕ್ ಅಹ್ಮದ್, ಸದಸ್ಯೆ ಪ್ರತಿಮಾ ರಾಣೆ, ಸುಬಿತ್ NR, ಸುರೇಂದ್ರ ರಾಣೆ, ಮುರಳಿ ರಾಣೆ, ಸಂದೇಶ್ ರಾಣೆ, ಕಾಂತಾರ ಉದಯ್ ಮೊದಲಾದವರು ಉಪಸ್ಥಿತರಿದ್ದರು.