ಕಾರ್ಕಳ : ಸಾಮಾನ್ಯ ಕಾರ್ಯಕರ್ತರಿಗೆ ನೀವು ನೀಡಿದ ಕಿರುಕುಳ, ದಬ್ಬಾಳಿಕೆ, ಸುಳ್ಳು ಕೇಸುಗಳು ಇವುಗಳೇ ನಿಮಗೆ ಈಗ ಜನಾಕ್ರೋಶವಾಗಿ ತಿರುಗಿನಿಂತಿದೆ. ಗಾಂಧಿ ತತ್ವವನ್ನು ಪಾಲನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯನ್ನು ಅವಹೇಳನ ಮಾಡುವ ಬಿಜೆಪಿ ಪಕ್ಷದಿಂದ ಸಜ್ಜನಿಕೆಯ ಪಾಠದ ಅಗತ್ಯವಿಲ್ಲ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರ ಮೇಲೆ ಸುಳ್ಳು ಆರೋಪ ಹಾಕಿ ಅವರ ಕಣ್ಣಲ್ಲಿ ಕಣ್ಣೀರು ಹಾಕಿಸಿ, ಅವರ ಸಮುದಾಯದ ಕುಲ ಕಸುಬನ್ನೂ ಅವಹೇಳನ ಮಾಡಿ ಗೋಪಾಲ ಭಂಡಾರಿಯವರನ್ನು ಅಪಪ್ರಚಾರದ ಅಸ್ತ್ರಗಳ ಮೂಲಕ ನಿರಂತರವಾಗಿ ಕಾಡಿದ ನೀವು ಕಾಂಗ್ರೆಸ್ ಪಕ್ಷಕ್ಕೆ ಸಜ್ಜನಿಕೆಯ ಪಾಠ ಮಾಡಲು ಯಾವ ನೈತಿಕತೆಯನ್ನೂ ಹೊಂದಿಲ್ಲ.

ನಮ್ಮ ಅಭ್ಯರ್ಥಿ ಉದಯ ಶೆಟ್ಟಿ ಸಾತ್ವಿಕ ಸ್ವಭಾವದ ಸರಳ ಸಜ್ಜನ ವ್ಯಕ್ತಿ. ಅದೆಷ್ಟೋ ಬಡವರ ಮನೆಗೆ ಬೆಳಕಾದವರು, ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕರುಣಿಸಿದವರು. ಧಾರ್ಮಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದವರು.ಅಂತಹ ಸಜ್ಜನನಿಕೆಯ ಯುನಿವರ್ಸಿಟಿ ಉದಯ ಶೆಟ್ಟಿ ಮುನಿಯಾಲು ಅವರಿಗೆ ನಿಮ್ಮಿಂದ ಸಜ್ಜನಿಕೆಯ ಟ್ಯೂಷನ್ ಪಾಠದ ಅಗತ್ಯವಿಲ್ಲ.ಕಾರ್ಕಳದ ಜನತೆ 19 ವರ್ಷದಿಂದ ನಿಮ್ಮ ಬೆಂಬಲಿಗರ ಗೂಂಡಾ ವರ್ತನೆ, ದೌರ್ಜನ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದು ಈ ಬಾರಿ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಯೋಗೀಶ್ ಇನ್ನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

