ಕಾರ್ಕಳ: ವಿಧಾನಸಭಾ ಚುನಾವಣೆಗೆ ಇನ್ನೇನು ಕೇಲವೇ ದಿನಗಳು ಬಾಕಿ ಉಳಿದಿರುವಾಗ ಕಾರ್ಕಳದಲ್ಲಿ ಆಣೆಪ್ರಮಾಣದ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ.
ಮುತಾಲಿಕ್ ಅವರು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಯಿಸಿದ ಮುತಾಲಿಕ್, ಬಿಜೆಪಿಯ ಅಭ್ಯರ್ಥಿಯ ಸೋಲಿನ ಹತಾಶೆಯಿಂದ ಬಿಜೆಪಿ ನಾಯಕರು ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಷ್ಟು ನೀಚರು ನಾವಲ್ಲ, ಕಾರ್ಕಳದಲ್ಲಿ ಭಷ್ಟಾಚಾರಮುಕ್ತ ಆಡಳಿತ ಹಾಗೂ ಹಿಂದುತ್ವದ ರಕ್ಷಣೆಗಾಗಿ ಕಾರ್ಕಳದಿಂದ ಸ್ಪರ್ಧಿಸುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡುತ್ತಿಲ್ಲ ಎಂದು ಕಾರ್ಕಳದ ಮಾರಿಗುಡಿ ದೇವಸ್ಥಾನದಲ್ಲಿ ತೆಂಗಿನಕಾಯಿ ಇಟ್ಟು ಆಣೆಪ್ರಮಾಣ ಮಾಡುತ್ತೇನೆ ತಾಕತ್ತಿದ್ರೆ ಬಿಜೆಪಿಯವರು ಪ್ರಮಾಣಕ್ಕೆ ಬರಲಿ ಎಂದು ಸವಾಲು ಹಾಕಿದರು. ಆಧಾರರಹಿತ ಆರೋಪಕ್ಕೆ ಉತ್ತರಿಸಲಿ ಎಂದರು.

ಮುತಾಲಿಕ್ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವವರು ಕಾರ್ಕಳದ ಕಾಂಗ್ರೆಸ್ ಪಕ್ಷದ ಪ್ರಥಮ ದರ್ಜೆ ಗುತ್ತಿಗೆದಾರನಿಗೆ ಪೆರ್ವಾಜೆ ಬಳಿಯ 4.71 ಎಕರೆ ಹಾಗೂ ಹೆಬ್ರಿಯಲ್ಲಿ ಕಾಂಗ್ರೆಸ್ ಮುಖಂಡನಿಗೆ 9 ಎಕರೆ ಜಾಗವನ್ನು ಅಕ್ರಮ ಸಕ್ರಮದಲ್ಲಿ ಮಂಜೂರಾತಿ ಮಾಡಿದ್ದಾರೆ, ಕಾಂಗ್ರೆಸ್ ಜತೆ ವ್ಯವಹಾರ ಮಾಡಿಕೊಂಡಿರುವ ಶಾಸಕರು ಇದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಇದೇವೇಳೆ ಮುತಾಲಿಕ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹರೀಶ್ ಅಧಿಕಾರಿ, ಗಂಗಾಧರ ಕುಲಕರ್ಣಿ,ಸುಭಾಸ್ ಚಂದ್ರ ಹೆಗ್ಡೆ ಉಪಸ್ಥಿತರಿದ್ದರು

