ಕಾರ್ಕಳ : ಕೇವಲ ವೈಯಕ್ತಿಕ ನಿಂದನೆ ಮತ್ತು ಅಪಪ್ರಚಾರವನ್ನೇ ಬಂಡವಾಳವಾಗಿರಿಸಿಕೊAಡು ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್, ಕಾರ್ಕಳ ಕ್ಷೇತ್ರದ ಸುಸಂಸ್ಕೃತ ಮತ್ತು ಸಜ್ಜನ ಮನಸ್ಸುಗಳನ್ನು ಕದಡುವ ಕೆಲಸವನ್ನು ಮಾಡುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಬಜಗೋಳಿ ಪೇಟೆಯಲ್ಲಿ ಜರುಗಿದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದರು.

ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಮಣಿರಾಜ್ ಶೆಟ್ಟಿ , ಕೆಪಿ ಶೆಣೈ, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ ,ಶಶಿಧರ್ ಶೆಟ್ಟಿ ಬರೊಡ, ಸದಾಶಿವ ಸಾಲ್ಯಾನ್, ಹರೀಶ್ ಡಿ ಸಾಲ್ಯಾನ್ ಪುಣೆ, ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉದಯ ಕೋಟ್ಯಾನ್, ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಅಲ್ಪಸಂಖ್ಯಾತ ಮೊರ್ಚಾದ ಜೆರಾಲ್ಡ್ ಡಿ ಸಿಲ್ವ ಉಪಸ್ಥಿತರಿದ್ದರು .
ಸುರೇಶ್ ಸಾಲ್ಯಾನ್ ಮುಡಾರು ಕಾರ್ಯಕ್ರಮ ನಿರೂಪಿಸಿದರು.

