ಕಾರ್ಕಳ: ರಣಬಿಸಿಲಿನ ನಡುವೆಯೂ ಕಾರ್ಕಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಚುರುಕು ಪಡೆದುಕೊಂಡಿದೆ. 11 ಗಂಟೆಯ ಸುಮಾರಿಗೆ 33% ಮತದಾನವಾಗಿದ್ದು, 62881 ಮತಗಳ ಪೈಕಿ 30679 ಮಹಿಳಾ ಮತದಾರರು ಮಚಲಾಯಿಸಿದರೆ 32202 ಪುರುಷರು ಹಕ್ಕು ಚಲಾಯಿಸಿ ಮತದಾನ ಪ್ರಕಿಯೆಯಲ್ಲಿ ಮಹಿಳೆಯರಿಗಿಂತ ಮುಂದಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,90,577 ಮತದಾರರಿದ್ದು ಈ ಪೈಕಿ 99,142 ಮಹಿಳೆಯರು ಹಾಗೂ 91435 ಪುರುಷ ಮತದಾರರಿದ್ದಾರೆ. ಗರಿಷ್ಠ ಮತದಾನ ನಡೆಯಲು ಆಯೋಗ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು ಈ ಬಾರಿ ಕಾರ್ಕಳ ತಾಲೂಕಿನಲ್ಲಿ ಗರಿಷ್ಠ ಮತದಾನವಾಗುವ ಸಾಧ್ಯತೆಯಿದೆ.