ಉಡುಪಿ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು ಈಗಾಗಲೇ ಕಾರ್ಕಳ ಮತ ಕ್ಷೇತ್ರದ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿ ಸುನಿಲ್ ಕುಮಾರ್ 1991 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಸುನಿಲ್ ಕುಮಾರ್ 39886 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ 37895 ಮತಗಳನ್ನು ಪಡೆದಿದ್ದು ತೀವೃ ಪೈಪೋಟಿ ನೀಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ 2432 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನದಲ್ಲಿದ್ದಾರೆ.
ಆರಂಭದಲ್ಲಿ ಮುನ್ನಡೆಯನ್ನು ಹೆಚ್ಚಿನ ಅಂತರದಲ್ಲಿ ಕಾಯ್ದುಕೊಂಡು ಬಂದಿದ್ದ ಸುನಿಲ್ ಕುಮಾರ್ 8ನೇ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯ ಮತಗಳಲ್ಲಿ ಕುಸಿತವಾಗಿದೆ.ಇನ್ನು ಸುಮಾರು 7 ಸುತ್ತಿನ ಮತ ಎಣಿಕೆ ಬಾಕಿಯಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವೃ ಸ್ಪರ್ಧೆ ಏರ್ಪಟ್ಟಿದೆ.