ಕಾರ್ಕಳ: ಕಾರ್ಕಳ ಉಚ್ಚಂಗಿ ಮಾರಿಯಮ್ಮನ ವಾರ್ಷಿಕ ಮಾರಿಪೂಜೆ ಸಂಭ್ರಮ ಸಡಗರದಿಂದ ಜರುಗಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆ ಮೂಲಕ ದೇವಿಯ ವಿಗ್ರಹವನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಮಾರ್ಕೆಟ್ ಬಳಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು.
ಮುಂಜಾನೆಯಿAದಲೇ ನೂರಾರು ಭಕ್ತಾಧಿಗಳು ದೇವಿಗೆ ಹಣ್ಣುಕಾಯಿ,ಹರಕೆಯ ಹೂವಿನಪೂಜೆ ಸಮರ್ಪಿಸಿ, ದೇವಿಗೆ ಮಲ್ಲಿಗೆ ಹೂವು,ಬಳೆ,ಕುಂಕುಮ ಮುಂತಾದಗಳನ್ನು ಹರಕೆಯ ರೂಪದಲ್ಲಿ ಅರ್ಪಿಸಿದರು. ಮಂಗಳವಾರ ರಾತ್ರಿ ಮಹಾಪೂಜೆಯ ಬಳಿಕ ದೇವಿಯನ್ನು ಮೆವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಬುಧವಾರ ಬೆಳಗ್ಗಿನಿಂದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ವಿವಿಧ ಪೂಜಾವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ದರ್ಶನದ ಬಳಿಕ ಮಾರಿ ಓಡಿಸುವ ಮೂಲಕ ದೇವಿಯ ಉತ್ಸವ ಸಂಪನ್ನಗೊAಡಿತು.