Share this news

ಕಾರ್ಕಳ: ಆಕೆ ಕೇವಲ 9ರ ಹರೆಯದ ಪುಟ್ಟ ಬಾಲಕಿ.ಬೇಸಗೆ ರಜೆಯನ್ನು ಇತರೇ ಮಕ್ಕಳೊಂದಿಗೆ ಆಟವಾಡುತ್ತಾ ಕಳೆಯುತ್ತಿದ್ದ ಈ ಪುಟ್ಟ ಬಾಲಕಿ ಜೋಕಾಲಿಯ ರೂಪದಲ್ಲಿ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.


ನಿಟ್ಟೆ ಕೆಮ್ಮಣ್ಣು ಅಂತೊಟ್ಟು ನಿವಾಸಿ ಲಕ್ಷö್ಮಣ್ ಪೂಜಾರಿ ಎಂಬವರ ಮಗಳು 9ರ ಹರೆಯ ಪುಟಾಣಿ ಬಾಲಕಿ ಮಾನ್ವಿ ಜೋಕಾಲಿಯಲ್ಲಿ ಸಿಲುಕಿ ಮೃತಪಟ್ಟಿರುವ ಪುಟ್ಟ ಬಾಲಕಿ. ಮಾನ್ವಿ ತನ್ನ ಮನೆ ಸಮೀಪದಲ್ಲಿರುವ ಅಜ್ಜ( ಅಪ್ಪನ ಚಿಕ್ಕಪ್ಪ)ನ ಮನೆಗೆ ಆಟವಾಡಲೆಂದು ಹೋಗಿದ್ದವೇಳೆ ಇನ್ನೋರ್ವ ಬಾಲಕಿಯ ಜತೆ ಸೀರೆಯಲ್ಲಿ ಜೋಕಾಲಿ ಕಟ್ಟಿ ಆಟವಾಡುತ್ತಿದ್ದಾಗ ಏಕಾಎಕಿ ಸೀರೆ ಬಾಲಕಿ ಮಾನ್ವಿ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಕಂದಮ್ಮ ಉಸಿರು ಚೆಲ್ಲಿದೆ. ಈ ಘಟನೆ ನಡೆದ ಬಳಿಕ ಆಕೆಯನ್ನು ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ ಆಕೆ ಅದಾಗಲೇ ಮೃತಪಟ್ಟಿದ್ದಳು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ

 

ಬೇಸಗೆ ರಜೆ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸದೇ ಇರುವುದು ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಬೇಸಗೆ ರಜೆ ಆರಂಭವಾಗುತ್ತಿದ್ದAತೆಯೇ ಮಕ್ಕಳು ನೀರಿನಲ್ಲಿ ಆಟವಾಡಲು ಹೋಗಿ ಬಲಿಯಾಗುತ್ತಿರುವ ಘಟನೆಗಳು ನಡೆಯುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ, ಇದರ ಜತೆಗೆ ಜೋಕಾಲಿಯಂತಹ ಅಪಾಯಕಾರಿ ಆಟದಲ್ಲಿಯೂ ಮಕ್ಕಳ ಮೇಲೆ ನಿಗಾ ಇಡಲೇಬೇಕಾದ ಹೊಣೆಗಾರಿಕೆ ಪೋಷಕರ ಮೇಲಿದೆ.ಇನ್ನೇನು ಬೇಸಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದುಪೋಷಕರು ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಬೇಕಿದೆ

Leave a Reply

Your email address will not be published. Required fields are marked *