Share this news

ಉಜಿರೆ: ಉಜಿರೆಯ ರುಡ್ ಸೆಟ್ ಸಂಸ್ಥೆಯಿAದ ಸ್ವ ಉದ್ಯೋಕಾಂಕ್ಷಿಗಳಿಗೆ ವಿವಿಧ ಉಚಿತ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಎಸ್ ಡಿ ಎಮ್ ಇ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಸ್ಥಾಪಿಸಿರುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ಸೆಪ್ಟೆಂಬರ್ ತಿಂಗಳವರೆಗೆ ನಡೆಯಲಿರುವ ವಿವಿಧ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ.

ಉಚಿತ ತರಬೇತಿಯ ಕೋರ್ಸ್ ಗಳ ವಿವರ ಈ ಕೆಳಗಿನಂತಿದೆ:

ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ದಿನಾಂಕ 13.06.2023 ರಿಂದ 22,06,2023ರವರೆಗೆ (10 ದಿನಗಳು)
ಸಿಸಿ ಕಿಮರಾ ಅಳವಡಿಸುವಿಕೆ & ದುರಸ್ಥಿ ದಿನಾಂಕ 16.06.2023 ರಿಂದ 28.06.2023ರವರೆಗೆ (13 ದಿನಗಳು)
ಎಲೆಕ್ಟಿಕಲ್ ಮೊಟಾರ್ ರಿವೈಂಡಿAಗ್ ದಿನಾಂಕ 22.06.2023 ರಿಂದ 21.07.2023ರವರೆಗೆ (31) ದಿನಗಳು)
ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್(ಪುರುಷರಿಗೆ) ದಿನಾಂಕ 03.07.2023 ರಿಂದ 01.08.2013ರವರೆಗೆ (30 ದಿನಗಳು)
ಮಹಿಳೆಯರ ವಸ್ತ್ರ ವಿನ್ಯಾಸ (ಟೈಲರಿಂಗ್) ದಿನಾಂಕ 02.08.2023 ರಿಂದ 31.08.2025ರವರೆಗೆ (30 ದಿನಗಳು)
ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ದಿನಾಂಕ 07.08.2023 ರಿಂದ 05.09.2023ರವರೆಗೆ (30 ದಿನಗಳು)
ಬ್ಯೂಟಿ ಪಾರ್ಲರ್ ಮೆನೇಜ್‌ಮೆಂಟ್ (ಮಹಿಳೆಯರಿಗೆ) ದಿನಾಂಕ 01.09,2023 ರಿಂದ 30.09.2023ರವರೆಗೆ (30 ದಿನಗಳು)

ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಜೇನು ಕೃಷಿ, ಎಸಿ ಮತ್ತು ಫ್ರಿಡ್ಜ್ ರಿಪೇರಿ, ಮೊಬೈಲ್ ಫೋನ್ ರಿಪೇರಿ, ಕೃತಕ ಆಭರಣ ತಯಾರಿಕೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ, ಕಂಪ್ಯೂಟರ್ ಹಾರ್ಡ್ ವೇರ್. ವಿದ್ಯುತ್ ಉಪಕರಣಗಳ ರಿಪೇರಿ, ಕಂಪ್ಯೂಟರೈಸಡ್ ಆಕೌಂಟಿAಗ್ (ಟ್ಯಾಲಿ), ಕೋಳಿ ಸಾಕಾಣಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಿದೆ.

ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸ0ಪೂರ್ಣವಾಗಿ ಉಚಿತವಾಗಿರುತ್ತದೆ. ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕರು/ಯುವತಿಯರು ಅರ್ಜಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.rudsetujire.com, www.rudsetitraining.org),  , ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ. 6364561982 ಗೆ ಸಲ್ಲಿಸಬಹುದು.

ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ 574 240, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9902594791, 9980885900, 9900793675. ಹಾಸ್ಟೆಲ್ ವಾರ್ಡನ್ ಸಂಖ್ಯೆ 08256-236404 ಅಥವಾ 9591044014ಗಳಿಗೆ ಕರೆ ಮಾಡಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *