ಕಾರ್ಕಳ: ಹೊಟೇಲ್ ಉದ್ಯಮಿಯೊಬ್ಬರು ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಲ್ಲಿ ತನ್ನ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಾಳ್‌ಬೆಟ್ಟು ನಿವಾಸಿ ಪ್ರಕಾಶ್ ಶೆಟ್ಟಿ ಎಂಬವರು ಕಳೆದ ಕೆಲ ದಿನಗಳ ಹಿಂದೆ ಕಾರನ್ನು ಬಂಡೀಮಠ ಬಸ್ ನಿಲ್ದಾದ ಇಂದಿರಾ ಕ್ಯಾಂಟೀನ್ ಬಳಿ ನಿಲ್ಲಿ ಕಾರಿನಲ್ಲಿ ತನ್ನ ಮೊಬೈಲ್ ಹಾಗೂ ಇತರೇ ದಾಖಲೆಗಳನ್ನು ಇಟ್ಟು ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ.
ಎರಡು ದಿನಗಳಿಂದ ಮನೆಯವರು ಪ್ರಕಾಶ್ ಶೆಟ್ಟಿಯವರನ್ನು ಸಾಕಷ್ಟು ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ. ಬಳಿಕ ಬಂಡೀಮಠ ಬಸ್ ನಿಲ್ದಾಣದಲ್ಲಿ ಅನಾಥ ಸ್ಥಿತಿಯಲ್ಲಿ ಕಾರು ನಿಂತಿರುವ ಕುರಿತು ಮಾಹಿತಿ ತಿಳಿದ ಮನೆಯವರು ಪೊಲೀಸರ ನೆರವಿನಿಂದ ಕಾರಿನ ಗಾಜು ಒಡೆದು ಮೊಬೈಲ್ ಹಾಗೂ ದಾಖಲೆಗಳನ್ನು ಪಡೆದಿದ್ದಾರೆ. ಅವರ ಮೊಬೈಲ್ ಪರಿಶೀಲಿಸಿದಾಗ ಎಲ್ಲಾ ಕರೆಗಳ ದಾಖಲೆಗಳು ಹಾಗೂ ವಾಟ್ಸಾಪ್ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಪ್ರಕಾಶ್ ಶೆಟ್ಟಿ ಹೊನ್ನಾವರದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ಇವರಿಗೆ ಕಳೆದ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ಸಾಕಷ್ಟು ಸ್ಥಿತಿವಂತರಾಗಿರುವ ಪ್ರಕಾಶ್ ಶೆಟ್ಟಿವರ ಉದ್ಯಮ ಕೂಡ ಚೆನ್ನಾಗಿ ನಡೆಯುತ್ತಿತ್ತು ಎನ್ನಲಾಗಿದೆ.ಪ್ರಕಾಶ್ ಶೆಟ್ಟಿ ನಾಪತ್ತೆಯಾಗಿರುವುದಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ ಕೌಟುಂಬಿಕ ಕಲಹದಿಂದ ಬೇಸತ್ತು ನಾಪತ್ತೆಯಾಗಿರುವ ಸಾಧ್ಯತೆಯ ಕುರಿತು ಶಂಕೆ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.ಪ್ರಕಾಶ್ ಶೆಟ್ಟಿ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬAಧಿಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.