ಭುವನೇಶ್ವರ : ಒಡಿಶಾದಲ್ಲಿ ಕಳೆದ ವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 288 ಜನ ಬಲಿಯಾಗಿರುವ ದಾರುಣ ಘಟನೆಯನ್ನು ಇನ್ನೂ ದೇಶ ಮರೆತಿಲ್ಲ. ಈ ನಡುವೆ ಒಡಿಶಾದಲ್ಲೇ ಮತ್ತೊಂದು ಅವಘಡ ನಡೆದಿದೆ. ರೈಲೊಂದರ ಎಸಿ ಕೋಚ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ಗುರುವಾರ ದುರ್ಗ್ – ಪುರಿ ಎಕ್ಸ್ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೂರ್ವ ಕರಾವಳಿ ರೈಲ್ವೆ ಇಲಾಖೆ ತಿಳಿಸಿದೆ. ಗುರುವಾರ ಸಂಜೆ ಖರಿಯಾರ್ ರೋಡ್ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ ಬಿ3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. “ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ರಿಲೀಸ್‌ನಿಂದಾಗಿ ಬ್ರೇಕ್ ಪ್ಯಾಡ್‌ಗಳಿಗೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯು ಬ್ರೇಕ್ ಪ್ಯಾಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಹಾನಿಯಾಗಿಲ್ಲ” ಎಂದು ರೈಲ್ವೆ ಇಲಾಖೆ ಹೇಳಿದೆ.

ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ರೈಲು ರಾತ್ರಿ 11 ಗಂಟೆಗೆ ರೈಲು ಹೊರಟಿದೆ ರೈಲ್ವೆ ಇಲಾಖೆ ಹೇಳಿದೆ. ಈ ಘಟನೆಯಿಂದ ಭಯಭೀತರಾಗಿದ್ದ ಪ್ರಯಾಣಿಕರು ಆತಂಕದಿAದ ರೈಲಿನಿಂದ ಕೆಳಗಿಳಿದಿದ್ದರು.



