ಅಜೆಕಾರು: ಕಡ್ತಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ವಿಶ್ವನಾಥ ಪೂಜಾರಿ ಕಡ್ತಲ ಇವರು ಕೊಡಮಾಡಿದ ಉಚಿತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಮಾಲತಿ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ. ಉದ್ಯಮಿ ತಾರಾನಾಥ ಪೂಜಾರಿ, ಪಂಚಾಯತ್ ಸದಸ್ಯರಾದ ಸುಕೇಶ್ ಹೆಗ್ಡೆ, ಸಂಜೀವ ಪೂಜಾರಿ ಕಂಟೆಬೆಟ್ಟು ಅಜೆಕಾರು ಸಹಕಾರಿ ವ್ಯವಸಾಯ ಬ್ಯಾಂಕಿನ ನಿರ್ದೇಶಕರಾದ ಅರುಣ್ ಕುಮಾರ್ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿದ್ಯಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯನಿ ಲಕ್ಷ್ಮಿ ಸ್ವಾಗತಿಸಿ, ಶಿಕ್ಷಕಿ ಕಸ್ತೂರಿ ವಂದಿಸಿದರು. ಶಿಕ್ಷಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.