ಕಾರ್ಕಳ : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಸಂಗಮ ಕಾರ್ಯಕ್ರಮವು ಕಡಾರಿಯ ನವೋದಯ ಯುವಕ ಮಂಡಲದ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ನಡೆಯಿತು .
ಮುಡಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಾಟ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಳ ಪೇರಡ್ಕದ ಆಯುರ್ವೇದ ವೈದ್ಯ ಚಂದ್ರಕಾಂತ ಜೋಶಿ ಯೋಗ ಮತ್ತು ಆಹಾರದ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಕೊಡ ಮಾಡುವ “ಪ್ಲೋರೇಂಸ್ ನೈಂಟಿಗೇಲ್” ಪ್ರಶಸ್ತಿಗೆ ಭಾಜನರಾದ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ಆಫೀಸರ್ ಮೀನಾಕ್ಷಿ ಡಿ ಸಿ ಇವರನ್ನು ಸನ್ಮಾನಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಅಶೋಕ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು .

ವೇದಿಕೆಯಲ್ಲಿ ಯೋಗ ಗುರುಗಳಾದ ವಿನಯ ರಾನಡೆ, ಸುಬ್ರಾಯ ಲೋಂಡೆ, ಬಜಗೋಳಿಯ ಅಮ್ಮ ಶಾಮಿಯಾನದ ಸುರೇಶ್ ದೇವಾಡಿಗ ಉಪಸ್ಥಿತರಿದ್ದರು. ಯೋಗ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ರಾಮನಾಥ ಲೋಂಡೆ ಕಾರ್ಯಕ್ರಮ ನಿರೂಪಿಸಿದರು.

