ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ ಹಾಗೂ ನಿಯೋಜನೆ ಇನ್ನುಮುಂದೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಸರ್ಕಾರಿ ನೌಕರರ ವರ್ಗಾವಣೆ, ನಿಯೋಜನೆಗೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ಇಲಾಖೆ ಆದೇಶಿಸಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ನಿರ್ದೇಶನ ನೀಡಿದ್ದು, ಜಿಲ್ಲಾ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯಾವುದಾದರೂ ವರ್ಗಾವಣೆ, ನಿಯೋಜನೆ ಪ್ರಸ್ತಾವನೆ ಇದ್ದಲ್ಲಿ, ಅಂತಹ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆಯಲು ತಿಳಿಸಿದ್ದಾರೆ. ಮಾತ್ರವಲ್ಲದೇ ನೌಕರರನ್ನು ಬೇರೆ ಇಲಾಖೆಗೆ ಅಥವಾ ಅನ್ಯ ಕಾರ್ಯನಿಮಿತ್ತ ಯಾವುದೇ ಪ್ರಾಧಿಕಾರದಿಂದ ಬರುವ ನಿಯೋಜನೆ ಕೋರಿಕೆಗಳನ್ನು ಕೂಡ ಸರ್ಕಾರಕ್ಕೆ ಸಲ್ಲಿಸಿ, ಆ ಬಳಿಕ ಸರ್ಕಾರದಿಂದ ಅನುಮೋದನೆಯನ್ನು ಪಡೆಯುವಂತೆ ನಿರ್ದೇಶಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯದ ಹೊರತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ, ನಿಯೋಜನೆ ಮಾಡುವಂತಿಲ್ಲ ಎಂಬುದಾಗಿ ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಸರ್ಕಾರಿ ನೌಕರರ ವರ್ಗ, ನಿಯೋಜನೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಲಾಗಿದೆ