ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2022-23ರ ಶೈಕ್ಷಣಿಕ ವರ್ಷದಲ್ಲಿ ಎರಡನೇ ಬಾರಿಗೆ ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಮಂqಪ್ರಕಟಿಸಿದೆ. ಹಿಂದಿನ ಅವಧಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರಿಗೆ ಈ ಕ್ರಮವು ಒಂದು ಉತ್ತಮ ಅವಕಾಶವಾಗಿದೆ.
ಎರಡನೇ ಬಾರಿ ಪೂರಕ ಪರೀಕ್ಷೆಯನ್ನು ನಡೆಸುವ ಪಿಯು ಮಂಡಳಿಯ ನಿರ್ಧಾರವು ಈಗಾಗಗಲೇ ಪೂರಕ ಪರೀಕ್ಷೆಯನ್ನು ಬರೆದ ಮತ್ತು ಹಿಂದಿನ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹೊಸ ಅವಕಾಶವು ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಮತ್ತು ಅವರ ಅಂಕಗಳನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.
ಮುಂಬರುವ ಎರಡನೇ ಪೂರಕ ಪರೀಕ್ಷೆಯು ಆಗಸ್ಟ್ 28 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿದೆ. ವರ್ಷದ ಹಿಂದಿನ ಸಾಮಾನ್ಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತೇರ್ಗಡೆಯಾಗಲು ಈ ಪೂರಕ ಪರೀಕ್ಷೆಯಲ್ಲಿ ಭಾಗವಹಿಸಬಹುದು.