
ಕಾರ್ಕಳ, ನ.05:ಇತ್ತೀಗಷ್ಟೇ ವಿವಾಹವಾಗಿದ್ದ ಯುವಕನೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೌಡೂರು ಎಂಬಲ್ಲಿ ನಡೆದಿದೆ.
ಸುದೇಶ ಭಂಡಾರಿ (32) ನೇಣಿಗೆ ಶರಣಾದ ದುರ್ದೈವಿ. ಸುದೇಶ್ ಭಂಡಾರಿ ಕುಮಟಾದಲ್ಲಿ ಉದ್ಯೋಗಿಯಾಗಿದ್ದು, ಕಳೆದ ಕೆಲದಿನಗಳ ಹಿಂದೆ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಹಾಡಿಮನೆ ಎಂಬಲ್ಲಿರುವ ತನ್ನ ಮನೆಗೆ ಬಂದಿದ್ದರು. ನ.5 ರಂದು ಗುರುವಾರ ಮತ್ತೆ ಕೆಲಸಕ್ಕೆ ಹೋಗುವ ತಯಾರಿಯಲ್ಲಿದ್ದು ಬೆಳಿಗ್ಗೆ ಸುಮಾರು 07-45 ಗಂಟೆಗೆ ಸುದೇಶ್ ರೂಮಿನ ಬಾಗಿಲಿಗೆ ಒಳಗಿಂದ ಚಿಲಕ ಹಾಕಿಕೊಂಡಿದ್ದು ಮನೆಯ ಟ್ಯಾರೀಸ್ ನ ಪ್ಯಾನ್ ಗೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು ಪತಿಯ ಆತ್ಮಹತ್ಯೆಯಿಂದ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
