ಕಾರ್ಕಳ : ತಾಲೂಕಿನ ಮಿಯ್ಯಾರು ಕಥೋಲಿಕ್ ಸಭಾ ಘಟಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರವು ಭಾನುವಾರ ಮಿಯ್ಯಾರು ಚರ್ಚ್ ನಲ್ಲಿ ನಡೆಯಿತು.
ಚರ್ಚ್ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳಿಸಿದ 14 ವಿದ್ಯಾರ್ಥಿಗಳಿಗೆ ಚರ್ಚ್ ನ ಧರ್ಮ ಗುರುಗಳಾದ ಪೌವ್ಲ್ ರೇಗೊ ಅವರು ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಜೋನ್ ಮಸ್ಕರೇನ್ಹಸ್, ಡೊಮಿನಿಕ್ ವೇಗಸ್, ಸಂಚಾಲಕಿ ರೀನಾ ಡಿ’ಸೋಜ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಐಡಾ ಪಿರೇರಾ, ಕಥೊಲಿಕ್ ಸಭಾ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

