ಬೆಂಗಳೂರು: ಭಾತರದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಾನ ಇಂದು ಚಂದ್ರನಿಗೆ ಇನ್ನೂ ಹತ್ತಿರವಾಗಿದೆ. ನೌಕೆ ಚಂದ್ರಯಾನ 3 ಚಂದ್ರನ ಅಂತಿಮ ಕಕ್ಷೆ ಸೇರಿಕೊಂಡಿದೆ. ಇಂದು ನಿರ್ಣಾಯಕ ದಿನವಾಗಿದ್ದು ನೌಕೆಯಿಂದ ಲ್ಯಾಂಡರ್ ಪ್ರತ್ಯೇಕವಾಗಿದೆ. ಐದನೇ ಹಾಗೂ ಅಂತಿಮ ಕಕ್ಷೆಯನ್ನ ಯಶಸ್ವಿಯಾಗಿ ತಲುಪಿದೆ. ನಿನ್ನೆ ಬುಧವಾರ ಬೆಳಗಿನ ಜಾವ 8.30ಕ್ಕೆ ಸರಿಯಾಗಿ ಅಂತಿಮ ಕಕ್ಷೆ ಸೇರಿದೆ. ನೌಕೆಯ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಂಡಿದೆ. ಆಗಸ್ಟ್ 23ರಂದು ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸ್ಮೂತ್ ಲ್ಯಾಂಡಿAಗ್ ಆಗಲಿದೆ.
ಬೇರ್ಪಟ್ಟ ನಂತರ, ಪೆರಿಲುನ್ (ಚಂದ್ರನ ಸಮೀಪ ಬಿಂದು) 30 ಕಿಲೋಮೀಟರ್ ಮತ್ತು ಅಪೋಲುನ್ (ಚಂದ್ರನಿAದ ದೂರದ ಬಿಂದು) 100 ಕಿ.ಮೀ. ಇರುವ ಕಕ್ಷೆಯಲ್ಲಿ ಇರಿಸಲು ಲ್ಯಾಂಡರ್ “ಡೀಬೂಸ್ಟ್” (ನಿಧಾನಗೊಳಿಸುವ ಪ್ರಕ್ರಿಯೆ) ಒಳಗಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿAಗ್ ಅನ್ನು ಆಗಸ್ಟ್ 23 ರಂದು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ.
ಒಮ್ಮೆ ಚಂದ್ರನ ಮೇಲೆ ಕಾಲಿಟ್ಟ ಬಳಿಕ ಲ್ಯಾಂಡರ್ ಪ್ರಗ್ಯಾನ್ ರೋವರ್‌ನ ಫೋಟೋ ತೆಗೆಯುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡಲು ತನ್ನ ಉಪಕರಣಗಳನ್ನು ನಿಯೋಜಿಸುತ್ತದೆ ಎಂದೂ ತಿಳಿದುಬಂದಿದೆ.




