Share this news

ನವದೆಹಲಿ: ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಅನ್ಯ ಔಷಧಗಳನ್ನು ಸೂಚಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೊರಡಿಸಿದ್ದ ಸೂಚನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಜೆನರಿಕ್ ಔಷಧಗಳ ಗುಣಮಟ್ಟ ಖಾತರಿ ಸಾಬೀತಾಗುವವರೆಗೆ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.

ಈ ಸಂಬAಧ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಐಎಂಎ ಪತ್ರ ಬರೆದಿದ್ದು, ಸರ್ಕಾರದ ಆದೇಶವು ರೋಗಿಗಳ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತದ ಜೆನರಿಕ್ ಔಷಧಗಳಲ್ಲಿ ಕೇವಲ ಶೇ.1ರಷ್ಟುಔಷಧಗಳು ಮಾತ್ರ ಗುಣಮಟ್ಟಪರೀಕ್ಷೆಗೆ ಒಳಪಟ್ಟಿವೆ. ದೇಶದಲ್ಲಿ ಗುಣಮಟ್ಟ ಖಾತರಿ ಪರೀಕ್ಷೆ ಕೂಡ ಸರಿಯಿಲ್ಲ ಎಂದು ಹೇಳಿದೆ.


ಔಷಧ ಖರೀದಿಸಲು ರೋಗಿಗಳು ಸಾಕಷ್ಟುಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು ಎಂದು ಇತ್ತೀಚೆಗೆ ಎನ್‌ಎಂಸಿ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಒಂದು ವೇಳೆ, ಜೆನೆರಿಕ್ ಔಷಧ ಬಿಟ್ಟು ಬ್ರ‍್ಯಾಂಡೆಡ್ ಔಷಧವನ್ನು ವೈದ್ಯರು ಸಲಹೆ ಮಾಡಿದರೆ ಅಂತಹ ವೈದ್ಯರ ಮೇಲೆ ದಂಡ ಹಾಗೂ ನಿರ್ದಿಷ್ಟಅವಧಿಗೆ ಲೈಸೆನ್ಸ್ ಅಮಾನತುಗೊಳಿಸುವಂತಹ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಔಷಧ ಕಂಪನಿಗಳಿAದ ವೈದ್ಯರು ಉಡುಗೊರೆ ಪಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.

ಜನೌಷಧಿ ಕೇಂದ್ರಗಳು ಹಾಗೂ ಇನ್ನಿತರೆ ಜೆನೆರಿಕ್ ಔಷಧ ಮಳಿಗೆಗಳಿಂದ ಜೆನೆರಿಕ್ ಔಷಧ ಖರೀದಿಸುವಂತೆ ರೋಗಿಗಳಿಗೆ ವೈದ್ಯರು ಸಲಹೆ ಮಾಡಬೇಕು. ಸಾಕಷ್ಟು ಜೆನೆರಿಕ್ ಔಷಧ ದಾಸ್ತಾನು ಇಟ್ಟುಕೊಳ್ಳುವಂತೆ ಆಸ್ಪತ್ರೆಗಳು ಹಾಗೂ ಸ್ಥಳೀಯ ಔಷಧ ಅಂಗಡಿಗಳಿಗೂ ವೈದ್ಯರು ಸೂಚಿಸಬೇಕು. ಬ್ರ‍್ಯಾಂಡೆಡ್ ಔಷಧಿಗೂ ಜೆನೆರಿಕ್ ಔಷಧಿಗೂ ವ್ಯತ್ಯಾಸವಿಲ್ಲ ಎಂದು ಜನರಲ್ಲಿ ಅರಿವು ಮೂಡಿಸಬೇಕು ಎಂದಿತ್ತು.

 

Leave a Reply

Your email address will not be published. Required fields are marked *