Share this news

ಅಜೆಕಾರು: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಅಜೆಕಾರು ಇವರ ವತಿಯಿಂದ ಹತ್ತನೇ ವರ್ಷದ ವರಮಹಾಲಕ್ಷ್ಮಿ ವೃತ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ಆಗಸ್ಟ್. 25 ಶುಕ್ರವಾರದಂದು ಬೆಳಿಗ್ಗೆ 9.30ರಿಂದ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ .

ವರಮಹಾಲಕ್ಷ್ಮಿ ವ್ರತ ಕೈಗೊಳ್ಳುವ ಮಹಿಳೆಯರು ಶುಕ್ರವಾರ ಬೆಳಿಗ್ಗೆ 9:30ರ ಒಳಗೆ ರಶೀದಿಯನ್ನು ಪಡೆದುಕೊಂಡು ಹಾಜರಿರಬೇಕು. ಪೂಜೆಗೆ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ 8.30ಕ್ಕೆ ಸರಿಯಾಗಿ ಅಜೆಕಾರು ಬಸ್ ನಿಲ್ದಾಣದಿಂದ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ತನು ಮನ ಧನದ ಸಹಕಾರವನ್ನು ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *