ಬೆಂಗಳೂರು ಆಗಸ್ಟ್ 23: ಬೆಂಗಳೂರಿನಲ್ಲಿ ಚಂದ್ರಯಾನ 3 ಲ್ಯಾಂಡರ್ ಮತ್ತು MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಹೇಳಿದೆ.
ಇಸ್ರೋ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಅವರೋಹಣ ಸಮಯದಲ್ಲಿ ತೆಗೆದಿದೆ. ಒಂದು ಚಂದ್ರಯಾನ 2 ಆರ್ಬಿಟರ್‌ನೊಂದಿಗೆ, ಎರಡನೆಯದು ನೇರವಾಗಿ ಇಸ್ರೋ ಕಮಾಂಡ್ ಸೆಂಟರ್‌ನೊಂದಿಗೆ ಹೀಗೆ ಚಂದ್ರಯಾನ 3 ಮಿಷನ್‌ನಲ್ಲಿ ದ್ವಿಮುಖ ಸಂವಹನ ಸೌಲಭ್ಯವಿದೆ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸ್ಪರ್ಶಿಸಿದ ನಂತರ ವಿಕ್ರಮ್ ಲ್ಯಾಂಡರ್ ಹಂಚಿಕೊಂಡ ಮೊದಲ ಅಪ್ಡೇಟ್ ಇದು.
ಭಾರತವು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಯಶಸ್ವಿ ಸ್ಪರ್ಶದ ನಂತರ, ಲ್ಯಾಂಡರ್ ರೋವರ್ ಅನ್ನು ನಿಯೋಜಿಸುತ್ತದೆ. ಇಸ್ರೋ ವಿಜ್ಞಾನಿಗಳು ಮುಂದಿನ 14 ದಿನಗಳವರೆಗೆ ಚಂದ್ರನ ಮಣ್ಣು ಮತ್ತು ಬಂಡೆಗಳ ಸಂಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯೋಗಗಳ ಸರಣಿಯನ್ನು ನಡೆಸುತ್ತಾರೆ. ದಕ್ಷಿಣ ಧ್ರುವದಲ್ಲಿ ಐಸ್ ನಿಕ್ಷೇಪಗಳು ಮತ್ತು ಖನಿಜಗಳು ಇರುತ್ತವೆ ಎಂದು ನಿರೀಕ್ಷಿಸಲಾಗಿದೆ.