Share this news

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿ 9 ವರ್ಷಗಳಾಗಿದ್ದು ಈ ದೀರ್ಘಾವಧಿಯಲ್ಲಿ ಅವರು ಒಂದೇ ಒಂದು ದಿನ ರಜೆ ಪಡೆದಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಪ್ರಧಾನ ಮಂತ್ರಿ ಕಛೇರಿ ನೀಡಿದ ಉತ್ತರದಲ್ಲಿ ಬಹಿರಂಗವಾಗಿದೆ. ಪ್ರಫುಲ್ ಪಿ ಸರ್ದಾ ಎಂಬವರು ಸಲ್ಲಿಸಿದ ಮಾಹಿತಿ ಹಕ್ಕಿನಲ್ಲಿ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ ಮೊದಲನೆಯದಾಗಿ ಪ್ರಧಾನಿ ಮೋದಿ ಅವರು ಪ್ರಧಾನಿಯಾದ ನಂತರ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು ಎಂದು. ಇದಕ್ಕೆ ಉತ್ತರಿಸಿರುವ ಪ್ರಧಾನಮಂತ್ರಿ ಕಚೇರಿ 2014ರ ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಯಾವುದೇ ರಜೆಯನ್ನು ಪಡೆದಿಲ್ಲ ಎಂದು ಉತ್ತರ ನೀಡಲಾಗಿದೆ.

ಎರಡನೆಯದಾಗಿ ಆರ್‌ಟಿಐ ಭಾರತದ ಪ್ರಧಾನ ಮಂತ್ರಿಯಾದ ನಂತರ ಇಲ್ಲಿಯವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಜರಿರುವ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದ ದಿನಗಳ ವಿವರಗಳನ್ನು ಕೇಳಿದೆ. ಇದಕ್ಕೆ ಪ್ರಧಾನಮಂತ್ರಿ ಆದ ಬಳಿಕ ಮೋದಿ ಅವರು ಈವರೆಗೆ 3000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ ಪ್ರಧಾನಮಂತ್ರಿ ಮೋದಿ ಅವರು ಎಲ್ಲಾ ಸಮಯದಲ್ಲೂ ಕರ್ತವ್ಯ ನಿರತರಾಗಿರುತ್ತಾರೆ ಎಂದು ಆರ್‌ಟಿಐಗೆ ಉತ್ತರದಲ್ಲಿ ತಿಳಿಸಲಾಗಿದೆ.

2019ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಚಟುವಟಿಕೆಯಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿಯವರು 20 ವರ್ಷಗಳವರೆಗೆ ಯಾವುದೇ ರಜೆಯನ್ನು ಪಡೆಯುವುದಿಲ್ಲ ಎಂದು ಹೇಳಿದ್ದರು.

Leave a Reply

Your email address will not be published. Required fields are marked *