ಹೆಬ್ರಿ : ಇಂದು ಬ್ರಹ್ಮಾವರ ವಲಯದ ಬೆಳ್ಳಾರ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕೆಪಿಎಸ್ ಮುನಿಯಾಲಿನ ಪ್ರೌಢಶಾಲಾ ವಿಭಾಗದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಮಂಡ್ಯದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ವಿಜೇತ ತಂಡಕ್ಕೆ ಶಾಲಾಭಿವೃದ್ಧಿ ಸಮಿತಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.