Share this news

ಮೂಡುಬಿದಿರೆ: ಶ್ರೀ ಕೋರ್ದಬ್ಬು ಸೇವಾ ಸಮಿತಿ ಮೂಡುಜಪ್ಪು ಉಳಾಯಿಬೆಟ್ಟು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ 19 ನೇ ವರ್ಷದ ಮನೋರಂಜನಾ ಕಾರ್ಯಕ್ರಮ “ಕೆಸರ್ದ ಪರ್ಬ”ದಲ್ಲಿ ದೈವ ನರ್ತಕ ನಾಗೇಶ್ ಕೋನಿಮಾರ್ ಅವರನ್ನು ಸನ್ಮಾನಿಸಲಾಯಿತು.

ಮೂಡುಜಪ್ಪು ಗುತ್ತುವಿನ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕೋರ್ದಬ್ಬು ಉಳಾಯಿಬೆಟ್ಟು ಗ್ರಾ.ಪಂ.ಅಧ್ಯಕ್ಷ ಹರಿಕೇಶ್ ಶೆಟ್ಟಿ, ಮಿತ್ತ ಮೂಡುಜಪ್ಪು ಗುತ್ತು ಅಶ್ವಿನಿ ಶೆಟ್ಟಿ, ಸೇವಾ ಸಮಿತಿ ಮೂಡುಜಪ್ಪು ಅಧ್ಯಕ್ಷ ಮೋನಪ್ಪ ಕುಕ್ಯಾನ್, ಮೂಡುಜಪ್ಪು ಜುಮ್ಮಾ ಮಸೀದಿಯ ಸಂಚಾಲಕ ಮೊಹಮ್ಮದ್ ಶಫಿ, ಮಹಮ್ಮಾಯಿ ಸ್ಪೋಟ್ಸ್ ೯ ಕ್ಲಬ್ ನ ಶ್ರೀಧರ್ ಕೋಟ್ಯಾನ್, ಶ್ರೀ ಸಾಯಿ ಫ್ರೆಂಡ್ಸ್ ಸರ್ಕಲ್ ಮಂಜಲ್ ದೋಟದ ಕುಸುಮಾಕರ, ಪೆರ್ಮಂಕಿ ಬ್ರಹ್ಮಶ್ರೀ ನಾರಾಯಣಗುರು ಭಜನಾ ಸೇವಾ ಮಂದಿರದ ಶ್ರೀಧರ ಪೂಜಾರಿ, ಉಳಾಯಿಬೆಟ್ಟು ಧ.ಗ್ರಾ.ಯೋಜನೆಯ ಸೇವಾ ಪ್ರತಿನಿಧಿ ಸುರೇಶ್ ಅರಂತಕೋಡಿ, ತಿರುವೈಲು ದುರ್ಗಾಮೃತ ನಿಲಯದ ಸುಭಾಷ್ ಬಾಲಕಟ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ಥಳೀಯರಾದ ವೆಂಕಪ್ಪ ಪೂಜಾರಿ,ಮಮತ ಸನಿಲ್ ಮತ್ತು ರತ್ನ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

Leave a Reply

Your email address will not be published. Required fields are marked *