ಮುಲ್ಕಿ: ಜೆಸಿಐ ಮುಲ್ಕಿ ಶಾಂಭವಿ 40ರ ಸಂಭ್ರಮದ ಜೇಸಿ ಸಪ್ತಾಹ “ಯಶೋಗಾಥೆ”ಸಮಾರೋಪ ಸಮಾರಂಭ ಪೂರ್ವಾಧ್ಯಕ್ಷರುಗಳ ಸಮ್ಮಿಲನ 40 ಸಮಾಜ ಸೇವಾ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ, ಮುಲ್ಕಿ ಶಾಂಭವಿ ಜೇಸಿ ಟ್ರಸ್ಟ್ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ. 16 ಶನಿವಾರ ಸಂಜೆ 6 ಗಂಟೆಗೆ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮುಲ್ಕಿ ಜೇಸಿ ಅಧ್ಯಕ್ಷ ಅನಿಲ್ ಕೊಲಕಾಡಿ ಹೇಳಿದರು.
ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜೇಸಿ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು ಅನೇಕ ಸಂಘ ಸಂಸ್ಥೆಗಳ ನಿರಂತರ ಬೆಂಬಲದಿಂದ ಸಂಸ್ಥೆ ಸಾಧನೆಯ ಶಿಖರಕ್ಕೇರಿದೆ ಎಂದರು
ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಸಹಿತ ಚಲನಚಿತ್ರ ನಿರ್ಮಾಪಕರು, ಪೊಲೀಸ್ ವರಿಷ್ಠ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಜೇಸಿ ಮಾಜೀ ಅಧ್ಯಕ್ಷ ದಿನೇಶ್ ಶೆಟ್ಟಿ,ಟ್ರಸ್ಟ್ ನ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ಹಬೀಬುಲ್ಲಾ, ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಜೆಸಿ ಸಪ್ತಾಹದ ನಿರ್ದೇಶಕ ವಿಶ್ವನಾಥ ಶಣೈ, ಪದಾಧಿಕಾರಿಗಳಾದ ಸುರೇಶ್ ರಾವ್, ಕಲ್ಲಪ್ಪ ತಡವಲಗ, ಪುಷ್ಪರಾಜ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು


