ಕಾರ್ಕಳ: ಮಹಾರಾಷ್ಟ್ರ ನೋಂದಣಿಯ ಕಾರನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸಾರಿಗೆ ಇಲಾಖೆಯ ನಕಲಿ ನಂಬರ್ ಪ್ಲೇಟ್ ಆಳವಡಿಸಿ ಓಡಾಡುತ್ತಿದ್ದ ಕಾರನ್ನು ಕಾರ್ಕಳ ನಗರ ಠಾಣಾ ಪೊಲೀಸರು ತಡೆದು ಪರಿಶೀಲನೆ ನಡೆಸಿ ಕಾರಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಿಟ್ಟೆ ಗ್ರಾಮದ ಬೊರ್ಗಲ್ ಗುಡ್ಡೆ ಎಂಬಲ್ಲಿನ ಸಂತೋಷ್ ಗೇರುಬೀಜ ಕಾರ್ಖಾನೆ ಬಳಿಯ ನಿವಾಸಿ ಆರೋಪಿ ಉಮ್ಮರ್ ಫಾರೂಕ್(35) ಎಂಬಾತ ನೀಲಿಬಣ್ಣದ ಬಲೆನೊ ಕಾರನ್ನು ಕಾರ್ಕಳ ಕಡೆಯಿಂದ ಉಡುಪಿಕಡೆಗೆ ಹೋಗುತ್ತಿದ್ದಾಗ ಪೊಲೀಸರು ಪರಶುರಾಮ ಥೀಮ್ ಪಾರ್ಕ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದವೇಳೆ ಬಲೆನೋ ಕಾರಿನ ಕಿಟಕಿ ಗಾಜುಗಳಿಗೆ ಕಪ್ಪು ಬಣ್ಣದ ಟಿಂಟ್ ಅಳವಡಿಸಿರುವುದನ್ನು ಗಮನಿಸಿ ಅನುಮಾನಗೊಂಡು ಆತನ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ, ಈ ಕಾರು ಮಹಾರಾಷ್ಟ್ರದ ಮಾಲಕರಿಗೆ ಸೇರಿದ್ದಾಗಿದ್ದು, ಕಾರಿನ ಅಸಲಿ ನೋಂದಣೆ MH 12 PT 158ಸಂಖ್ಯೆ ಆಗಿದ್ದು, ಆದರೆ ಉಮ್ಮರ್ ಫಾರೂಕ್ ಹಾಗೂ ಆತನ ಸ್ನೇಹಿತರಾದ ಧೀರಜ್ ಹಾಗೂ ಪ್ರೀತಮ್ ಸೇರಿಕೊಂಡು ಅಸಲಿ ನಂಬರ್ ಬದಲಿಸಿ ಈ ಕಾರಿಗೆ KA19 MG 7844 ಸಂಖ್ಯೆಯ ನಕಲಿ ನಂಬರ್ ಪ್ಲೇಟ್ ಆಳವಡಿಸಿ ಕಾರಿನ ಮಾಲೀಕರಿಗೆ ವಂಚನೆ ಎಸಗುವ ಹಾಗೂ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸಿ ಯಾವುದೋ ದುಷ್ಕೃತ್ಯ ಎಸಗಲು ಈ ಕೃತ್ಯ ಎಸಗಲು ಸಂಚು ರೂಪಿಸಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



