

ಹೆಬ್ರಿ, ಸೆ.29: ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ ಕೋಳಿ ಅಂಕ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರ ತಂಡ ದಾಳಿ ನಡೆಸಿ 15ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು, ಆಟಕ್ಕೆ ಬಳಸಲಾದ ಹುಂಜ ಕೋಳಿಗಳನ್ನು ಹಾಗೂ ಹಲವು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.
ಪೊಲೀಸರು ದಾಳಿ ನಡೆಸಿದ ತಕ್ಷಣವೇ 10 ರಿಂದ 12 ಜನರ ತಂಡ ಕೋಳಿಗಳ ಸಹಿತ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಪೈಕಿ ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೋಳಿಗಳ ಜೊತೆಗೆ ವರಂಗದ ಕೆಲ್ ಟೆಕ್ ಎನರ್ಜೀಸ್ ಕಂಪೆನಿಯ ಆವರಣಕ್ಕೆ ನುಗ್ಗಿದ್ದರು. ಕಂಪೆನಿಯ ಕಟ್ಟಡದೊಳಗೆ ಅಪರಿಚಿತರು ಅಕ್ರಮವಾಗಿ ನುಗ್ಗಿದಾಗ ಬೆಚ್ಚಿದ ಅಲ್ಲಿನ ಸಿಬ್ಬಂದಿಗಳು ತಕ್ಷಣವೇ ಹೆಬ್ರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಇತ್ತ ಪರಾರಿಯಾದವರ ಹುಡುಕಾಟದಲ್ಲಿದ್ದ ಪೊಲೀಸರು ತಕ್ಷಣವೇ ಕಂಪೆನಿಗೆ ಧಾವಿಸಿ ಪರಿಶೀಲಿಸಿದಾಗ ಕೊಳಿ ಅಂಕದಲ್ಲಿ ತಪ್ಪಿಸಕೊಂಡವರು ಎಂದು ಖಚಿತಪಡಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






.
.
.
.
.
.
.
.
.
.
.
.
.
.
.
.
.
.
.
.
