ಗಾಜಾಪಟ್ಟಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆದಿದ್ದು ಘಟನೆಯಲ್ಲಿ 500 ಮಂದಿ ಬಲಿಯಾಗಿದ್ದಾರೆ ಎಂಬ ಘಟನೆ ವರದಿಯಾಗಿದೆ.
ಇದನ್ನು ಇಸ್ರೇಲ್ ಸೇನೆ ಬಲವಾಗಿ ನಿರಾಕರಿಸಿದೆ. ನಾವು ಯಾವುದೇ ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ, ಇದು ಹಮಾಸ್ ಉಗ್ರರು ನಡೆಸಿದ ರಾಕೆಟ್ ದಾಳಿ ಮಿಸ್ಫೈರ್ ಆಗಿ ಆಸ್ಪತ್ರೆ ಧ್ವಂಸವಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಜೊತೆಗೆ ಇಸ್ರೇಲ್ ಈ ಘಟನೆಯ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಆರೋಪಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ಎಂದು ಜಾಗತಿಕ ಮಾಧ್ಯಮಗಳಿಗೆ ಕರೆ ನೀಡಿದೆ.
ನಿನ್ನೆ ಸಂಜೆ ಇಸ್ರೇಲ್ ಸಮಯ 6.59ಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಲು ಹಾರಿಬಿಟ್ಟ ರಾಕೆಟ್ ಮಿಸ್‌ಫೈರ್ ಆಗಿ ಸ್ಫೋಟಗೊಂಡಿದೆ. ಪರಿಣಾಮ ಅದು ಗಾಜಾ ಪಟ್ಟಿಯ ಆಸ್ಪತ್ರೆ ಮೇಲೆ ಬಿದ್ದು 100 ಜನರ ಸಾವಿಗೆ ಕಾರಣವಾಗಿದೆ. ಈ ಕೃತ್ಯವನ್ನು ನಾವು ಮಾಡಿಲ್ಲ ಎಂದು ಇಸ್ರೇಲ್ ಹೇಳಿದೆ. ಆದರೆ ಹಮಾಸ್ ಉಗ್ರರು ಇದು ಇಸ್ರೇಲ್‌ನದ್ದೇ ಕೈವಾಡ ಎಂದು ಆರೋಪಿಸಿದ್ದಾರೆ. ಇಸ್ರೇಲ್ ಗಾಜಾಪಟ್ಟಿಯಲ್ಲಿ ಹತ್ಯಾಕಾಂಡ ನಡೆಸುತ್ತಿದೆ ಎಂದು ಹಮಾಸ್ ಸಂಘಟನೆ ಆರೋಪಿಸಿದೆ.