Share this news

ಕಾರ್ಕಳ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಅಪಸ್ಮಾರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣ(55ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಕೃಷ್ಣ ಅವರು ಅಪಸ್ಮಾರ (ಫಿಟ್ಸ್) ನಿಂದ ಬಳಲುತ್ತಿದ್ದು, ಕಳೆದ ಸುಮಾರು 4 ವರ್ಷಗಳಿಂದ ಬೆಳ್ಮಣ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನೆಲ್ಲಿಕಟ್ಟೆಯ ತನ್ನ ಸಹೋದರಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಕೃಷ್ಣ ಗಣೇಶ ಚತುರ್ಥಿಗೆ ಬಂದವರು ಸಹೋದರಿಯ ಮನೆಯಲ್ಲಿಯೇ ಇದ್ದರು. ಎಂದಿನAತೆ ಮಂಗಳವಾರ (ಅ.17) ಬೆಳಿಗ್ಗೆ ಉಪಹಾರ ಸೇವಿಸಿದ್ದ ಅವರು 11.30ರ ವೇಳೆಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥರಾದಾಗ ಫಿಟ್ಸ್ ಬಂದು ಬಿದ್ದಿರಬಹುದೆಂದು ಶಂಕಿಸಿ ವೈದ್ಯರನ್ನು ಕರೆಸಿದ್ದರು. ಕೂಡಲೇ ಬಂದ ವೈದ್ಯರು ಕೃಷ್ಣರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಶಂಕಿಸಲಾಗಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

Leave a Reply

Your email address will not be published. Required fields are marked *