Share this news

ಕಾರ್ಕಳ: ಕಾರ್ಕಳ ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಸದಾ ಸಹಕಾರ ನೀಡಲು ಬದ್ಧನಾಗಿದ್ದೇನೆ. ಆದರೆ ಅಭಿವೃದ್ಧಿ ನೆಪದಲ್ಲಿ ನಡೆಸುತ್ತಿರುವ ಭ್ರಷ್ಟಾಚಾರವನ್ನು ಕಂಡು ಸುಮ್ಮನಿರುವ ಜಾಯಮಾನ ನನ್ನದಲ್ಲ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಬೈಲೂರಿನ‌ ಎರ್ಲಪ್ಪಾಡಿಯ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆ ಯಾವುದೇ ಗೊಂದಲವಿಲ್ಲದೇ ಸಾರ್ವಜನಿಕ ಸೇವೆಗೆ ಮುಕ್ತವಾಗಬೇಕು ಎಂಬುವುದು ನಮ್ಮ ನಿಲುವಾಗಿದೆ. ಯಾವುದೇ ಯೋಜನೆ ಪರಿಪೂರ್ಣಗೊಳ್ಳಬೇಕಾದರೆ ಸಾಧಕಭಾದಕಗಳ ಗಮನ ಹರಿಸಬೇಕಾದ ಹೊಣೆಗಾರಿಕೆ ಜನಪ್ರತಿನಿಧಿಗಳದ್ದು ಎಂಬುವುದನ್ನು ಸ್ಥಳೀಯ ಶಾಸಕ ಸುನೀಲ್ ಕುಮಾರ್ ಮರೆಯಬಾರದಿತ್ತು.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿತ್ತು.‌ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅಂದು ಬಗೆಹರಿಸುತ್ತಿದ್ದರೆ ಇಂದು ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಬಿಜೆಪಿಯ ಅಧಿಕಾರಾವಧಿಯಲ್ಲಿ ಪರಶುರಾಮ‌ಥೀಮ್ ಪಾರ್ಕಿನ ಕಾಮಗಾರಿ ನಿಲ್ಲಿಸುವಂತೆ ಅದೇಶ ಬಂದಿರುವುದನ್ನು ಶಾಸಕ ಸುನೀಲ್ ಕುಮಾರ್‌ ಮರೆಮಾಚುವ ಪ್ರಯತ್ನದ ಭಾಗವಾಗಿ ಬಿಜೆಪಿಗರು‌ ಇದೀಗ‌ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕಡೆ ಬೆಟ್ಟು ತೋರಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.

 

 

ನಾನು ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯ ಸಂದರ್ಭದಲ್ಲಿ ವೇದಿಕೆ‌ಹಂಚಿಕೊಂಡಿರುವುದು ನಿಜ. ಆಹ್ವಾನದ ಮೇರೆಗೆ ಆ ವೇದಿಕೆಯಲ್ಲಿ ಪಾಲ್ಗೊಂಡಿದೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡುವ ಹೀನ ಪ್ರವೃತ್ತಿ ನಡೆಸಿಲ್ಲ ಎಂಬುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ ಎಂದು ಉದಯ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಪರಶುರಾಮ ಥೀಮ್ ಪಾರ್ಕಿನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯ ಬದಲಾಗಿ ಫೈಬರ್ ಪ್ರತಿಮೆಯನ್ನು ನಿರ್ಮಿಸಿ ಅದುವೇ ಕಂಚಿನ ಪ್ರತಿಮೆ ಎಂದು ಸಾರಿ ಹೇಳುವ ವಿಫಲ ಪ್ರಯತ್ನ ನಡೆಸುವ ಶಾಸಕ ಹಾಗೂ ಬಿಜೆಪಿಗರ ನಿಲುವಿನ ಕುರಿತು ಉದಯಕಯಮಾರ್ ಅಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಸತ್ಯ ಶೋಧನೆಯಲ್ಲಿ ಪರಶುರಾಮನ ಪ್ರತಿಮೆ ಕಂಚಿನದಲ್ಲ ಎಂಬುವುದು ದೃಢಪಟ್ಟಿದ್ದು, ತಪಿಸ್ಥರ ವಿರುದ್ಧ ಕ್ರಮಕ್ಕೆ ಸರಕಾರವನ್ನು ಆಗ್ರಹಿಸುವುದಾಗಿ‌ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.‌

 

 

 

 

 

 

 

 

 

Leave a Reply

Your email address will not be published. Required fields are marked *