ಹೆಬ್ರಿ: ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಮತ್ತಾವು ಜಲಪಾತಕ್ಕೆ ಸ್ನಾನಕ್ಕೆಂದು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ.
ಹೆಬ್ರಿಯ ಚಾರ ಗ್ರಾಮದ ಹುತ್ತುರ್ಕೆ ನಿವಾಸಿ ಪ್ರಸ್ತುತ್(21) ಹಾಗೂ ಕರ್ಜೆಯ ನಿವಾಸಿ ಉಮೇಶ್ ಶೆಟ್ಟಿ(45) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.
ಪ್ರಸ್ತುತ್ ಹೆಗ್ಡೆ ಹಾಗೂ ಉಮೇಶ್ ಶೆಟ್ಟಿ ಇಬ್ಬರು ಸ್ನೇಹಿರಾಗಿದ್ದು, ಪ್ರಸ್ತುತ್ ಮಂಗಳೂರಿನಲ್ಲಿ ಇಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಶನಿವಾರ ರಜೆಯಿದ್ದ ಕಾರಣದಿಂದ ತನ್ನ ಗೆಳೆಯ ಉಮೆಶ್ ಶೆಟ್ಟಿಗೆ ಕರೆ ಮಾಡಿ ಇವರಿಬ್ಬರು ಜತೆಯಾಗಿ ಶನಿವಾರ ಮಧ್ಯಾಹ್ನ ಕಬ್ಬಿನಾಲೆಯ ಮತ್ತಾವು ಜಲಪಾತಕ್ಕೆ ಸ್ನಾನಕ್ಕೆಂದು ತೆರಳಿದ್ದರು. ಇವರಿಬ್ಬರು ಸಂಜೆಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಸಂಬAಧಿಕರು ನೀಡಿದ ದೂರಿನ ಮೇರೆಗೆ ಹೆಬ್ರಿ ಪೊಲೀಸರು ಸ್ಥಳೀಯರ ನೆರವಿನಿಂದ ರಾತ್ರಿ ಫಾಲ್ಸ್ನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಕೊನೆಗೂ ಇವರಿಬ್ಬರ ಶವ ಹೊಳೆಯಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜಲಪಾತ ವೀಕ್ಷಣೆಗೆ ಬಂಡೆಕಲ್ಲು ಹತ್ತುವಾಗ ಆಯತಪ್ಪಿ ಜಾರಿಬಿದ್ದು ತಲೆಗೆ ಗಾಯಗಳಾಗಿ ನೀರಿನಲ್ಲಿ ಮುಳುಗಿ ಸಾವನ್ನಪಿರಬಹುದು ಅಥವಾ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಜಲಪಾತಕ್ಕೆ ರಜಾದಿನಗಳಲ್ಲಿ ದೂರದ ಊರುಗಳಿಂದ ಪ್ರವಾಸಿಗರು ಬರುತ್ತಿದ್ದು, ಇದೇ ಪರಿಸರದಲ್ಲಿ ಈ ಹಿಂದೆ ಸಾಕಷ್ಟು ದುರ್ಘಟನೆಗಳು ನಡೆದಿದ್ದರೂ ಪ್ರವಾಸಿಗರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.




